ತನ್ನ ಉತ್ತರಾಧಿಕಾರಿಯಾಗಿ ರಂಜನ್ ಗೊಗೋಯ್ ಹೆಸರು ಶಿಫಾರಸು ಮಾಡಿದ ದೀಪಕ್ ಮಿಶ್ರಾ

Update: 2018-09-04 15:44 GMT

ಹೊಸದಿಲ್ಲಿ, ಸೆ. 3: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತನ್ನ ಉತ್ತರಾಧಿಕಾರಿಯನ್ನಾಗಿ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರನ್ನು ಶಿಫಾರಸು ಮಾಡಿ ಮಂಗಳವಾರ ಸರಕಾರಕ್ಕೆ ಅಧಿಕೃತವಾಗಿ ಪತ್ರ ರವಾನಿಸಿದ್ದಾರೆ. ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತಿಯಾಗಲಿದ್ದಾರೆ. ಉನ್ನತ ನ್ಯಾಯಾಲಯಕ್ಕೆ ಸದಸ್ಯರನ್ನು ನಿಯೋಜನೆ ನಿರ್ವಹಿಸುವ ‘ಮೆಮರಾಂಡಮ್ ಆಫ್ ಪ್ರೊಸೀಜರ್’ ಪ್ರಕಾರ, ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನಿಯೋಜಿತರಾಗುವವರು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿರಬೇಕು.

ಮುಂದಿನ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ನಿಯೋಜಿಸಲು ಹಾಲಿ ಭಾರತದ ಮುಖ್ಯ ನ್ಯಾಯಮೂರ್ತಿಯವರ ಶಿಫಾರಸನ್ನು ಕೇಂದ್ರ ಕಾನೂನು ಸಚಿವರು ಸೂಕ್ತ ಸಮಯದಲ್ಲಿ ಕೋರುವುದು ಇದರ ನಿಬಂಧನೆ. ಈ ಪ್ರಕ್ರಿಯೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಅವರ ಶಿಫಾರಸು ಸ್ವೀಕರಿಸಿದ ಬಳಿಕ ಕಾನೂನು ಸಚಿವರು ರಾಷ್ಟ್ರಪತಿ ಅವರ ಸಲಹೆಗಾಗಿ ಈ ಶಿಫಾರಸನ್ನು ಪ್ರಧಾನಿ ಅವರ ಮುಂದಿರಿಸುತ್ತಾರೆ.

ಕೇಂದ್ರ ಸರಕಾರ ಈ ಶಿಫಾರಸಿಗೆ ಅನುಮೋದನೆ ನೀಡಿದರೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ಅಕ್ಟೋಬರ್ 3ರಂದು ಪ್ರಮಾಣ ವಚನ ಬೋಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News