ಬೈಕ್‌ಗೆ ಒಮಿನಿ ಕಾರು ಢಿಕ್ಕಿ: ಸವಾರರಿಬ್ಬರಿಗೆ ಗಾಯ
ಮಂಗಳೂರು, ಸೆ.4: ಒಮಿನಿ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ಮುದ್ರೆಬೈಲು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಪಡುಮಂಗಳೂರು ನಿವಾಸಿಗಳಾದ ಮುಹಮ್ಮದ್ ಸುಹೈಲ್ (22), ಮುಹಮ್ಮದ್ ಶಾ ನವಾಝ್(20) ಗಾಯಗೊಂಡವರು.
ಪಡುಮಂಗಳೂರಿನಿಂದ ನೀರುಮಾರ್ಗದ ಕಡೆಗೆ ಶಾ ನವಾಝ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್‌ನಲ್ಲಿ ಸುಹೈಲ್ ಸಹಸವಾರರಾಗಿ ಪ್ರಯಾಣಿಸುತ್ತಿದ್ದರು. ಬೆಳಗ್ಗೆ 9.25ರ ಸುಮಾರು ಮುದ್ರೆಬೈಲು ಬಳಿ ಸಮಿಪಿಸುತ್ತಿದ್ದಂತೆ ನೀರುಮಾರ್ಗದ ಕಡೆಯಿಂದ ಬರುತ್ತಿದ್ದ ಮಾರುತಿ ಒಮಿನಿ ಕಾರು ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್‌ಗೆ ಢಿಕ್ಕಿ ಹೊಡೆಸಿದ್ದಾರೆ.
ಪರಿಣಾಮ ಬೈಕ್ ಸವಾರ- ಸಹಸವಾರರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಮಂಗಳೂರು ಸಂಚಾರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.