×
Ad

ಸೆ.6: ಶಕ್ತಿನಗರದಲ್ಲಿ ‘ಹ್ಯಾಪಿ ಸ್ಕೂಲ್ ’ಉದ್ಘಾಟನೆ

Update: 2018-09-04 21:28 IST

ಮಂಗಳೂರು, ಸೆ. 4: ಮಂಗಳೂರು ನಾರ್ತ್ ಇನ್ನರ್ ವೀಲ್ ಕ್ಲಬ್ ಒಂದು ಮಹಿಳೆಯರ ಸಂಘಟನೆಯಾಗಿದ್ದು , ಸಮಾಜ ಸೇವಾ ಕಾರ್ಯಕ್ರಮದಲ್ಲಿ ಕಳೆದ 44ವರ್ಷ ತೊಡಗಿಸಿಕೊಂಡ ಸಂಸ್ತೆಯಾಗಿದ್ದು ಹಿರಿಯ ನಾಗರಿಕರಿಗೆ, ರೋಗಿಗಳಿಗೆ ಅಗತ್ಯವುಳ್ಳವರಿಗೆ ಅಂಗವಿಕಲರಿಗೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮತ್ತು ಮಾದಕ ದ್ರವ್ಯದ ಹಾನಿಯ ಬಗ್ಗೆ ನಿರಂತರವಾಗಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುತ್ತದೆ.

2018-19ನೆ ವರ್ಷಕ್ಕೆ ಸಂಬಂಧಿಸಿದಂತೆ ಇನ್ನರ್ ವೀಲ್ ಜಿಲ್ಲೆ 318ರ ಕಲಿಕೆ ಕಾರ್ಯಕ್ರಮದ ಯೋಜನೆ ‘ಹ್ಯಾಪಿ ಸ್ಕೂಲ್ ’ಎಂಬ ಕಾರ್ಯಕ್ರಮದ ಉದ್ಘಾಟನೆ ಸೆ.6ರಂದು 10 ಗಂಟೆಗೆ ಮಂಗಳೂರಿನ ಶಕ್ತಿನಗರದ ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಿದರು, ಪ್ರಾಯೋಜಕರಾದ ಅನಿಲ್ ಬನ್ಸಾಲ್,ಸುಷ್ಮಾ ಬನ್ಸಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News