ಜಪಾನ್‌ಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ ‘ಜೆಬಿ’

Update: 2018-09-04 16:15 GMT

ಟೋಕಿಯೊ, ಸೆ. 4: ಜಪಾನ್‌ನ ಪಶ್ಚಿಮ ಕರಾವಳಿಗೆ ‘ಜೆಬಿ’ ಚಂಡಮಾರುತ ಅಪ್ಪಳಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ 10 ಲಕ್ಷಕ್ಕೂ ಅಧಿಕ ಜನರಿಗೆ ಸೂಚನೆ ನೀಡಲಾಗಿದೆ ಹಾಗೂ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಚಂಡಮಾರುತದ ದಾಳಿಯಲ್ಲಿ ಕನಿಷ್ಠ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಭಾರೀ ಮಳೆ, ಭೂಕುಸಿತ, ಪ್ರವಾಹ ಮತ್ತು ದಾಖಲೆಯ ಉಷ್ಣತೆ ಈ ಬೇಸಿಗೆಯಲ್ಲಿ ಜಪಾನನ್ನು ಜರ್ಝರಿತಗೊಳಿಸಿದ ಬಳಿಕ ಈಗ ಜೆಬಿ ಚಂಡಮಾರುತ ಅಪ್ಪಳಿಸುತ್ತಿದೆ.

ಚಂಡಮಾರುತದ ಪರಿಣಾಮವಾಗಿ ಬೃಹತ್ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿವೆ ಹಾಗೂ ಕಾರುಗಳು ಮಗುಚಿವೆ.

ಕೆಲವು ಸ್ಥಳಗಳಲ್ಲಿ ತೀರಕ್ಕೆ ಅಪ್ಪಳಿಸಿದ ಅಲೆಗಳು, 1961ರಲ್ಲಿ ಅಪ್ಪಳಿಸಿದ ಚಂಡಮಾರುತವೊಂದರ ಬಳಿಕದ ಅತಿ ದೊಡ್ಡ ಅಲೆಗಳಾಗಿವೆ.

ಒಸಾಕದ ಕನ್ಸಾಯಿ ವಿಮಾನ ನಿಲ್ದಾಣದಲ್ಲಿನ ಒಂದು ರನ್‌ವೇ ಪ್ರವಾಹದಿಂದ ಮುಳುಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News