ಉಳ್ಳಾಲ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಅನುದಾನ: ಸಚಿವ ಖಾದರ್
Update: 2018-09-04 21:40 IST
ಮಂಗಳೂರು, ಸೆ.4: ಮಂಗಳೂರು (ಉಳ್ಳಾಲ) ಕ್ಷೇತ್ರ ವ್ಯಾಪ್ತಿಯ ಮುಡಿಪು- ಇರಾ 1.5 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕೆಐಎಡಿಬಿಯಿಂದ 10.5 ಕೋ.ರೂ., ಸೋಮೇಶ್ವರ ದೇವಳದಿಂದ ಸರಸ್ವತಿ ಕಾಲನಿ ಮೂಲಕ ಉಳ್ಳಾಲ ಒಳಪೇಟೆ ರಸ್ತೆ ಕಾಂಕ್ರಿಟೀಕರಣಕ್ಕೆ 3 ಕೋ.ರೂ., ಉಳ್ಳಾಲ ಮೊಗವೀರಪಟ್ಣದಿಂದ ಬೀಚ್-ಪ್ಯಾರಿಸ್ ಜಂಕ್ಷನ್-ದರ್ಗಾ-ಸೆಬಾಸ್ಟಿಯನ್ ಚರ್ಚ್ ರಸ್ತೆ ಕಾಂಕ್ರಿಟೀಕರಣಕ್ಕೆ 3.30 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಒಂಬತ್ತುಕೆರೆ ಶಾಲೆಯಲ್ಲಿ 2.8 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಶಾಲೆಯ ಪಾಠದ ಜತೆಗೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರಿಗೆ ಆಶ್ರಯ ನೀಡಲು ಮತ್ತು ಇತರ ಬಹು ಉಪಯೋಗಕ್ಕೆ ಇದನ್ನು ಬಳಸಲಾಗುವುದು. ಇದಕ್ಕೆ ವಿಶ್ವ ಬ್ಯಾಂಕ್ ಶೇ.75 ಮತ್ತು ರಜ್ಯ ಸರಕಾರ ಶೇ.25 ಅನುದಾನ ನೀಡಲಿವೆ ಎಂದು ಖಾದರ್ ಹೇಳಿದರು.