ಮ್ಯೂಸಿಯಂಗೆ ಬೆಂಕಿ: 90 ಶೇ. ಕಲಾಕೃತಿಗಳು ಭಸ್ಮ?

Update: 2018-09-04 17:08 GMT

ರಿಯೋ ಡಿ ಜನೈರೋ (ಬ್ರೆಝಿಲ್), ಸೆ. 4: ರಿಯೋ ಡಿ ಜನೈರೊದ ನ್ಯಾಶನಲ್ ಮ್ಯೂಸಿಯಂನಲ್ಲಿ ಕಾಣಿಸಿಕೊಂಡ ಬೆಂಕಿಗೆ ಕಾರಣವನ್ನು ಪತ್ತೆಹಚ್ಚಲು ಹಾಗೂ ಸುಮಾರು 2 ಕೋಟಿ ಕಲಾಕೃತಿಗಳ ಪೈಕಿ ಎಷ್ಟು ಉಳಿದಿದೆ ಎಂಬುದನ್ನು ತಿಳಿಯಲು ವಿಧಿವಿಧಾನ ತನಿಖೆಗಾರರು ಮತ್ತು ಸಂಶೋಧಕರು ತನಿಖೆ ಆರಂಭಿಸಿದ್ದಾರೆ.

ಇದು ಲ್ಯಾಟಿನ್ ಅಮೆರಿಕದ ಅತ್ಯಂತ ಮಹತ್ವದ ವಸ್ತುಸಂಗ್ರಹಾಲಯಗಳ ಪೈಕಿ ಒಂದಾಗಿತ್ತು.

ರವಿವಾರ ಇಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿತ್ತು. ಕಟ್ಟಡ ಕುಸಿಯುವುದಿಲ್ಲ ಎಂಬುದನ್ನು ಖಾತರಿಪಡಿಸಲು ಇಂಜಿನಿಯರ್‌ಗಳು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

ಮ್ಯೂಸಿಯಂನಲ್ಲಿದ್ದ ಕಲಾಕೃತಿಗಳ ಪೈಕಿ ಸುಮಾರು 90 ಶೇಕಡ ಸುಟ್ಟುಹೋಗಿರಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News