ನಿಧನ: ಸಾಮಾಜಿಕ ಕಳಕಳಿಯ ರಾಜಕಾರಣಿ ದಾಮು ಗರಡಿಕರ್
Update: 2018-09-04 23:38 IST
ಭಟ್ಕಳ, ಸೆ. 4: ಜನತಾದಳದ ಮೂಲಕ ರಾಜಕೀಯ ಪ್ರವೇಶಿ ನಂತರ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಹಲವು ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಸಾಮಾಜಿಕ ಕಳಕಳಿಯ ರಾಜಕಾರಣಿ, ರಾಜ್ಯಮಟ್ಟದ ಕ್ರಿಡಾಪಟು ದಾಮೋದರ್ ನಾರಾಯಣ ಗರ್ಡಿಕರ್ ಹಲವು ದಿನಗಳ ಅನಾರೋಗ್ಯದ ಬಳಿಕ ಸೋಮವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಈಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಇವರು ಪತ್ನಿ, 2 ಇಬ್ಬರು ಪುತ್ರಿಯರು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಮಾಜ ಸೇವಕರು, ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಸಂತಾಪವನ್ನು ವ್ಯಕ್ತಿಪಡಿಸಿದ್ದಾರೆ.