ಮೂಡುಬಿದಿರೆಯಲ್ಲಿ ರಾಜ್ಯ ಸೀನಿಯರ್ಸ್, ಜ್ಯೂನಿಯರ್ಸ್ ಅಥ್ಲೆಟಿಕ್ಸ್ : ಆಳ್ವಾಸ್ ಮುನ್ನಡೆ

Update: 2018-09-04 18:11 GMT

ಮೂಡುಬಿದಿರೆ, ಸೆ. 4: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2018ರಲ್ಲಿ  ಎರಡನೇ ದಿನ ಒಟ್ಟು 7 ನೂತನ ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು ಈ ಪೈಕಿ ಅತಿಥೇಯ ಆಳ್ವಾಸ್ 4 ದಾಖಲೆ ಬರೆದಿದೆ.

ಎರಡನೇ ದಿನದ ಕೊನೆಯಲ್ಲಿ 393 ಅಂಕಗಳೊಂದಿಗೆ ಆಳ್ವಾಸ್ ಸಮಗ್ರ ಮುನ್ನಡೆ ಸಾಧಿಸಿ ಪ್ರಾಬಲ್ಯ ಮೆರೆದಿದೆ. 130 ಅಂಕಗಳೊಂದಿಗೆ ಬೆಂಗಳೂರಿನ ಡಿವೈಇಎಸ್ ಎರಡನೇ ಸ್ಥಾನದಲ್ಲಿದೆ. 

ಪುರುಷರ ಪೋಲ್ ವಾಲ್ಟ್‍ನಲ್ಲಿ ಸಾಯಿ ಬೆಂಗಳೂರಿನ ಬಿನೇಶ್ ಜಾಕೋಬ್ (4.61 ಮೀಟರ್), ಪುರುಷರ ಅಂಡರ್ 20 ವಿಭಾಗದ 1500ಮೀ ಓಟದಲ್ಲಿ  ಆಳ್ವಾಸ್‍ನ ಶಶಿಧರ್ (4:00.7 ಸೆ)1500, ಡಿಸ್ಕಸ್ ತ್ರೋನಲ್ಲಿ ಬೆಂಗಳೂರು ಡಿವೈಎಸ್‍ನ ಸಂಜೀವ್ ಕೊಳವಿ (48.77ಮೀ), ಮಹಿಳೆಯರ ಅಂಡರ್20 ಹೈಜಂಪ್‍ನಲ್ಲಿ ಆಳ್ವಾಸ್‍ನ ಅಭಿನಯ ಎಸ್. ಶೆಟ್ಟಿ (1.75 ಮೀ), 4*100 ಮೀ ರಿಲೇನಲ್ಲಿ ಆಳ್ವಾಸ್ (47.4ಸೆ), ಬಾಲಕರ ಅಂಡರ್ 14 600ಮೀ ಓಟದಲ್ಲಿ ಆಳ್ವಾಸ್‍ನ ರಿಹಾನ್,(1:28:16ಸೆ), ಹೊಸ ದಾಖಲೆ ಬರೆದಿದ್ದು ಮಹಿಳೆಯರ ಹ್ಯಾಮರ್ ತ್ರೋನಲ್ಲಿ ಮೈಸೂರು ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್‍ನ ಹರ್ಷಿತ್ ಡಬ್ಲ್ಯು.ಆರ್ (46.52 ಮೀ) ತನ್ನದೇ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ. 

ಮೊದಲ ಎರಡು ದಿನಗಳಲ್ಲಿ ಒಟ್ಟು 15 ಕೂಟ ದಾಖಲೆಗಳು ನಿರ್ಮಾಣವಾಗಿದ್ದು ಈ ಪೈಕಿ ಅತಿಥೇಯ ಆಳ್ವಾಸ್ 10 ದಾಖಲೆಗಳೊಂದಿಗೆ ಸಂಭ್ರಮಿಸಿದೆ. ಮೊದಲ ದಿನ 800ಮೀ ಓಟದಲ್ಲಿ ದಾಖಲೆ ಬರೆದಿದ್ದ ಆಳ್ವಾಸ್‍ನ ಶಶಿಧರ್ ಎರಡನೇ ದಿನ 1500 ಮೀ ರೇಸ್‍ನಲ್ಲಿಯೂ ದಾಖಲೆಯ ಡಬ್ಬಲ್ ಧಮಾಕಾ ತನ್ನದಾಗಿಸಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News