×
Ad

ಮಲಬಾರ್‌ಗೋಲ್ಡ್‌ನಿಂದ ಶಿಕ್ಷಕರ ದಿನಾಚರಣೆ

Update: 2018-09-05 20:13 IST

ಉಡುಪಿ, ಸೆ.5: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಬುಧವಾರ ಸಂಸ್ಥೆಯ ಉಡುಪಿ ಮಳಿಗೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ವ್ಯಕ್ತಿತ್ವ ರೂಪಿಸುವ ಶಿಕ್ಷಕರನ್ನು ಗುರುತಿಸುವ ಮಲಬಾರ್ ಗೋಲ್ಡ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಶಿಕ್ಷಕರುಗಳಾದ ಜಯ ವಿಜಯ ಕುಮಾರಿ, ಕುದಿ ವಸಂತ ಶೆಟ್ಟಿ, ರಾಜರಾಮ್, ಪ್ರೊ.ಗಣೇಶ್ ಬಿಜೈ, ಬಾಲಗಂಗಾಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಉಡುಪಿ ಪೌರಾಯುಕ್ತ ಜನಾರ್ದನ, ನಗರಸಭೆ ಸದಸ್ಯೆ ಮಾನಸ ಚಿದಾನಂದ ಪೈ ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹಮಾನ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5ರಿಂದ ಸೆ.30ರವರೆಗೆ ಎಲ್ಲ ಶಿಕ್ಷಕರಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಪ್ರತಿ 25,000 ರೂ. ಮೌಲ್ಯದ ಖರೀದಿ ಮೇಲೆ 1000 ರೂ. ರಿಯಾಯಿತಿ ನೀಡಲಾಗುವುದು ಎಂದು ಹಫೀಝ್ ರೆಹಮಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News