1 ಕೋಟಿ ಕುಟುಂಬಕ್ಕೆ ಉಚಿತ ಸ್ಮಾರ್ಟ್‌ಫೋನ್ !

Update: 2018-09-05 15:47 GMT

ಹೊಸದಿಲ್ಲಿ, ಸೆ. 5: ವಸುಂಧರಾ ರಾಜೆ ನೇತೃತ್ವದ ರಾಜಸ್ಥಾನ ಸರಕಾರ 1 ಕೋಟಿ ಕುಟಂಬಕ್ಕೆ ಉಚಿತ ಸ್ಮಾರ್ಟ್ ಫೋನ್ ನೀಡುವುದಾಗಿ ಬುಧವಾರ ಘೋಷಿಸಿದೆ.

‘ಭಾಮಶಾಹ್ ಡಿಜಿಟಲ್ ಪರಿವಾರ್ ಯೋಜನೆ’ ಫಲಾನುಭವಿಗಳಿಗೆ 1000 ರೂ. ಹಣಕಾಸು ನೀಡುವುದಾಗಿ ವಸುಂಧರಾ ರಾಜೆ ಹೇಳಿದ್ದಾರೆ. ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ಹಾಗೂ ತಮ್ಮ ಅರ್ಹತೆಯಂತೆ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆಯಲು ಅನುಕೂಲವಾಗಲು ಸ್ಮಾರ್ಟ್‌ಫೋನ್ ಖರೀದಿಗೆ 1 ಕೋಟಿ ಕುಟುಂಬ 1000 ನೆರವು ಪಡೆಯಲಿದೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಪ್ರತಿ ಭಾಮಶಾಹ್ ಕುಟುಂಬ 500 ರೂ. ವೌಲ್ಯದ ಸ್ಮಾರ್ಟ್‌ಫೋನ್ ಹಾಗೂ 500 ರೂ. ಇಂಟರ್‌ನೆಟ್ ಪ್ಯಾಕ್ ಅನ್ನು ಪಡೆಯಲಿದ್ದಾರೆ ಎಂದು ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ವಸುಂಧರಾ ರಾಜೆ ಹೇಳಿದರು.

ಭಾಮಶಾಹ್ ಯೋಜನೆಯನ್ನು ಬಡವರಿಗಾಗಿ ಆರಂಭಿಸಲಾಗಿದೆ. ಸೌಲಭ್ಯವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆ ಅಡಿಯಲ್ಲಿ ಪೂರೈಸಲಾದ ಮೊಬೈಲ್ ಮೂಲಕ ಕುಟುಂಬಗಳು ಸರಕಾರದ ವಿವಿಧ ಯೋಜನೆಗಳ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ವಸುಂಧರಾ ರಾಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News