ಉಡುಪಿ: ಜಿಲ್ಲಾ ಮಟ್ಟದ ಯುವಜನೋತ್ಸವ

Update: 2018-09-05 15:51 GMT

ಉಡುಪಿ, ಸೆ.5: 2018-19 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಸೆ.23ರಂದು ಅಜ್ಜರಕಾಡಿನ ಜಿಲ್ಲಾ ಪುರಭವನದಲ್ಲಿ ನಡೆಯಲಿದೆ.

ಯುವಜನೋತ್ಸವದ ಸ್ಪರ್ಧೆಗಳು: ಜಾನಪದ ನೃತ್ಯ(ಗುಂಪು ಸ್ಪರ್ಧೆ), ಜಾನಪದ ಹಾಡು (ಗುಂಪು ಸ್ಪರ್ಧೆ), ಏಕಾಂಕ ನಾಟಕ(ಹಿಂದಿ, ಇಂಗ್ಲೀಷ್ -ಗುಂಪು ಸ್ಪರ್ಧೆ), ಶಾಸ್ತ್ರೀಯ ಗಾಯನ( ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ), ಶಾಸ್ತ್ರೀಯ ವಾದ್ಯ( ತಬಲಾ, ಸಿತಾರ್, ಕೊಳಲು, ವೀಣೆ, ಮೃದಂಗ, ಹಾರ್ಮೋನಿಯಂ, ಗಿಟಾರ್), ಶಾಸ್ತ್ರೀಯ ನೃತ್ಯ(ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕಥಕ್, ಕೂಚುಪುಡಿ, ಆಶುಬಾಷಣ(ಹಿಂದಿ ಅಥವಾ ಇಂಗ್ಲೀಷ್).

 ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ವಾದ್ಯ ಪರಿಕರಗಳನ್ನು ತಾವೇ ತರಬೇಕು. ಭಾಗವಹಿಸುವ ಸ್ಪರ್ಧಿಗಳಿಗೆ ಇಲಾಖಾ ವತಿಯಿಂದ ಪ್ರಯಾಣ ಭತ್ಯೆ ನೀಡಲಾಗುವುದು. ಈ ಸ್ಪರ್ಧೆಗಳಲ್ಲಿ 15ರಿಂದ 29 ವರ್ಷದೊಳಗಿನ ಯುವಕ/ ಯುವತಿಯರು ಮತ್ತು ಶಾಲಾ ಕಾಲೇಜುಗ ವಿದ್ಯಾರ್ಥಿಗಳು ಭಾಗವಹಿಸಬಹುದು.

ಭಾಗವಹಿಸುವ ಸ್ಪರ್ಧಿಗಳು ವಯಸ್ಸಿನ ದೃಢೀಕರಣ ಪತ್ರವನ್ನು ತರಬೇಕು. ಭಾಗವಹಿಸುವ ಸ್ಪರ್ಧಿಗಳು ತಮ್ಮ ನೋಂದಾವಣೆಯನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಬೆಳಗ್ಗೆ 9ರ ಒಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ಡಾ.ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ (ದೂರವಾಣಿ:0820-2521324) ಇವರನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News