ಇಂಟರ್‌ನೆಟ್ ಕಂಪೆನಿಗಳು ಪ್ರಜಾಸತ್ತೆ ರಕ್ಷಣೆಗಾಗಿ ‘ಶಸ್ತ್ರಾಸ್ತ್ರ ಸ್ಪರ್ಧೆ’ಯಲ್ಲಿವೆ: ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್

Update: 2018-09-05 17:31 GMT

ವಾಶಿಂಗ್ಟನ್, ಸೆ. 5: ಫೇಸ್‌ಬುಕ್ ಹಾಗೂ ಇತರ ಪ್ರಮುಖ ಇಂಟರ್‌ನೆಟ್ ಆಧರಿತ ಕಂಪೆನಿಗಳು ಪ್ರಜಾಸತ್ತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ‘ಶಸ್ತ್ರಾಸ್ತ್ರ ಸ್ಪರ್ಧೆ’ಯಲ್ಲಿವೆ ಎಂದು ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಹೇಳಿದ್ದಾರೆ.

ಅಮೆರಿಕದ ಸೆನೆಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಬರೆದ ಲೇಖನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಚಾರಣೆಯ ವೇಳೆ, ಸೆನೆಟರ್‌ಗಳು ಫೇಸ್‌ಬುಕ್ ಮತ್ತು ಟ್ವಿಟರ್‌ನ ಉನ್ನತ ಅಧಿಕಾರಿಗಳನ್ನು ಪ್ರಶ್ನಿಸಲಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಮಾಣದಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷಭಾಷಣಗಳು ಪ್ರಸಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯುತ್ತಿದೆ. ಅದೂ ಅಲ್ಲದೆ, ಈ ಸಾಮಾಜಿಕ ಜಾಲತಾಣಗಳು ರಾಜಕೀಯ ಪಕ್ಷಪಾತ ಮಾಡುತ್ತಿವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಮಿತ್ರರು ಆರೋಪಿಸುತ್ತಿದ್ದಾರೆ.

‘‘ಫೇಸ್‌ಬುಕ್ ಮುಂತಾದ ಕಂಪೆನಿಗಳು ನುರಿತ ಶತ್ರುಗಳನ್ನು ಎದುರಿಸುತ್ತಿದ್ದಾರೆ ಹಾಗೂ ಅವರಿಗೆ ನಿಧಿ ಧಾರಾಳವಾಗಿ ಹರಿದುಬರುತ್ತಿದೆ ಹಾಗೂ ಅವರು ದಿನ ದಿನಕ್ಕೆ ಅವರು ಚಾಣಾಕ್ಷರಾಗುತ್ತಿದ್ದಾರೆ’’ ಎಂದು ಝುಕರ್‌ಬರ್ಗ್ ಬರೆದಿದ್ದಾರೆ.

‘‘ಇದೊಂದು ಶಸ್ತ್ರಾಸ್ತ್ರ ಸ್ಪರ್ಧೆ. ಹೊರಗಿನ ಹಸ್ತಕ್ಷೇಪದಿಂದ ಅಮೆರಿಕದ ಪ್ರಜಾಸತ್ತೆಯನ್ನು ಕಾಪಾಡಲು ಅಮೆರಿಕದ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳು ಜೊತೆಯಾಗಿ ಹೋರಾಡಬೇಕಾದ ಅಗತ್ಯವಿದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News