ಜಪಾನ್ ಚಂಡಮಾರುತ: ವಿಮಾನ ನಿಲ್ದಾಣದಿಂದ ದೋಣಿಗಳ ಮೂಲಕ ಪ್ರಯಾಣಿಕರ ತೆರವು

Update: 2018-09-05 17:33 GMT

ಟೋಕಿಯೊ, ಸೆ. 5: ಪಶ್ಚಿಮ ಜಪಾನ್‌ಗೆ ಮಂಗಳವಾರ ಅಪ್ಪಳಿಸಿದ ಶಕ್ತಿಶಾಲಿ ಚಂಡಮಾರುತಕ್ಕೆ ಕನಿಷ್ಠ ಒಂಬತ್ತು ಮಂದಿ ಬಲಿಯಾಗಿದ್ದಾರೆ.

ಅದೇ ವೇಳೆ, ವಿಮಾನ ನಿಲ್ದಾಣವೊಂದರಲ್ಲಿ ಸಿಕ್ಕಿಹಾಕಿಕೊಂಡ ಸುಮಾರು 3,000 ಪ್ರಯಾಣಿಕರನ್ನು ದೋಣಿಗಳ ಮೂಲಕ ಸಾಗಿಸಲಾಗಿದೆ ಎಂದು ಸರಕಾರಿ ಟಿವಿ ಎನ್‌ಎಚ್‌ಕೆ ಬುಧವಾರ ವರದಿ ಮಾಡಿದೆ.

10 ಲಕ್ಷಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕ ನಿಂತುಹೋಗಿದೆ.

‘ಜೆಬಿ’ ಚಂಡಮಾರುತವು 25 ವರ್ಷಗಳ ಅವಧಿಯಲ್ಲಿ ಜಪಾನ್‌ಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತವಾಗಿದೆ.

ಹೊಂಶು ದ್ವೀಪದಲ್ಲಿರುವ ಕನ್‌ಸಾಯಿ ವಿಮಾನ ನಿಲ್ದಾಣ ನೀರಿನಿಂದಾವೃತವಾಗಿದೆ. ಆದಾಗ್ಯೂ, ಸುಮಾರು 3,000 ಪ್ರಯಾಣಿಕರು ಮಂಗಳವಾರ ರಾತ್ರಿಯನ್ನು ವಿಮಾನ ನಿಲ್ದಾಣದಲ್ಲೇ ಕಳೆದರು.

ವಿಮಾನ ನಿಲ್ದಾಣದ ಅಧಿಕಾರಿಗಳು ಬುಧವಾರ ಬೆಳಗ್ಗೆ ಈ ಪ್ರಯಾಣಿಕರನ್ನು ಸಮೀಪದ ಕೋಬೆ ವಿಮಾನ ನಿಲ್ದಾಣಕ್ಕೆ ವೇಗದ ದೋಣಿಗಳ ಮೂಲಕ ಸಾಗಿಸಿದರು ಎಂದು ಎನ್‌ಎಚ್‌ಕೆ ವರದಿ ಮಾಡಿದೆ.

ಕನ್ಸಾಯಿ ವಿಮಾನ ನಿಲ್ದಾಣ ಪುನಾರಂಭಗೊಳ್ಳು ಒಂದು ವಾರವೇ ಬೇಕಾಗಬಹುದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News