×
Ad

ಕ್ಯಾಂಪಸ್ ಫ್ರಂಟ್ ದ.ಕ ವತಿಯಿಂದ ‘ಪ್ರತಿರೋಧ ದಿನ’

Update: 2018-09-05 23:07 IST

ಮಂಗಳೂರು, ಸೆ. 5: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ ಖ್ಯಾತ ಲೇಖಕಿ ಮತ್ತು ಚಿಂತಕಿ ಗೌರಿ ಲಂಕೇಶ್ ಹತ್ಯಾ ದಿನವನ್ನು ‘ ಪ್ರತಿರೋಧ ದಿನವನ್ನಾಗಿ ಮಂಗಳೂರಿನ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ವಿದ್ಯಾರ್ಥಿಗಳು ಭಿತ್ತಿ ಪತ್ರಗಳನ್ನು ಹಿಡಿದು ಗೌರಿ ಹತ್ಯೆ ದುಷ್ಕರ್ಮಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧ್ಯಕ್ಷರಾದ ಇಮ್ರಾನ್ ಪಿ.ಜೆ ಮಾತನಾಡಿ ಗೌರಿ ಲಂಕೇಶ್ ಹತ್ಯಾ ಪ್ರಕರಣದ ತನಿಖೆಯನ್ನು ಭೇದಿಸಿದ ಸಿಟ್ ಅಧಿಕಾರಿಗಳನ್ನು ಶ್ಲಾಘಿಸಿ ಪ್ರಮುಖ ರೂವಾರಿಯ ಪತ್ತೆಗೆ ಒತ್ತಾಯಿಸಿದರು. ಸನಾತನ ಸಂಸ್ಥೆ ದೇಶದಲ್ಲೆಡೆ ವಿಚಾರವಾದಿಗಳ ಹತ್ಯೆ ನಡೆಸುವ ಮೂಲಕ ಭಯೋತ್ಪಾದನೆಯನ್ನು ಬಿತ್ತುತ್ತಿದ್ದಾರೆ. ಬುದ್ದಿ ಜೀವಿಗಳು ಹೋರಾಟಗಾರರು ದುಷ್ಕರ್ಮಿಗಳ ಯಾವುದೇ ಬೆದರಿಕೆಗೆ ಹೆದರದೆ ಅನ್ಯಾಯ, ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಿರಂತರವಾಗಿರಬೇಕು ಈ ಮೂಲಕ ಇಂತಹ ಶಕ್ತಿಗಳನ್ನು ಪ್ರತಿರೋಧಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಸಾದಿಕ್, ಉಪಾಧ್ಯಕ್ಷರಾದ ಫಹದ್, ಮುರ್ಶಿದಾ ಮತ್ತು ಕಾರ್ಯದರ್ಶಿಗಳಾದ ನಿಝಾಂ, ಮುಫೀದಾ ಮತ್ತು ಅಫ್ರೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News