ಸೆ. 7: ಕೆ.ಎಂ.ಶಾಫಿ ಮೆಮೋರಿಯಲ್ ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆ

Update: 2018-09-05 17:39 GMT

ಮಂಗಳೂರು, ಸೆ.5: ಕೆ.ಎಂ.ಶಾಫಿ ಮೆಮೋರಿಯಲ್ ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆ ಮತ್ತು ಶಾಂತಿ ಸೆಂಟರ್ ಉದ್ಘಾಟನೆ ಹಾಗೂ ಸದ್ಭಾವನಾ ಕಾರ್ಯಕ್ರಮವನ್ನು ಉಪ್ಪಿನಂಗಡಿಯ ಯು.ಟಿ. ಸೀದಿಯಬ್ಬ ಎಂಪೋರಿಯಂನಲ್ಲಿ ಸೆ. 7ರಂದು ಸಂಜೆ 4:15ಕ್ಕೆ ಹಮ್ಮಿಕೊಳ್ಳಲಾಗಿದೆ.

ಶಾಂತಿ ಸೆಂಟರ್‌ನ್ನು ಆಯಿಶಾ ವಿದ್ಯಾಸಂಸ್ಥೆಗಳ ಆತೂರು ಗೌರವಾಧ್ಯಕ್ಷ ಡಾ. ಅಬ್ದುಲ್ ಮಜೀದ್ ಉದ್ಘಾಟಿಸಲಿದ್ದಾರೆ. ಕೆ.ಎಂ.ಶಾಫಿ ಮೆಮೋರಿಯಲ್ ಸಾರ್ವಜನಿಕ ಗ್ರಂಥಾಲಯವನ್ನು ಸಾಹಿತಿ ಅರವಿಂದ ಚೊಕ್ಕಾಡಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಸಾನಿಧ್ಯವನ್ನು ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಈಶ ವಿಠಲದಾಸ ಸ್ವಾಮೀಜಿ ವಹಿಸಲಿದ್ದಾರೆ. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹಾಗೂ ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಫಾ. ಅಬೆಲ್ ಲೋಬೊ ಸದ್ಭಾವನಾ ಸಂದೇಶ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಕೇಂದ್ರ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ ಆಚಾರ್ಯ, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಮಠ, ಜಮಾತೆ ಇಸ್ಲಾಮೀ ಹಿಂದ್‌ನ ವಲಯ ಸಂಚಾಲಕ ಅಬ್ದುಸ್ಸಲಾಮ್ ಯು. ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News