ಇಲಿಜ್ವರ ಔಷಧ ಕೊರತೆ ಎದುರಿಸುತ್ತಿರುವ ಕೇರಳ

Update: 2018-09-05 17:43 GMT

ಹೊಸದಿಲ್ಲಿ, ಅ. 5: ನೆರೆ ಪೀಡಿತ ಕೇರಳದಲ್ಲಿ ಇಲಿ ಜ್ವರ ಹರಡುತ್ತಿದ್ದು, ಔಷಧಗಳ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಔಷಧ ಪೂರೈಸಲು ಇತರ ರಾಜ್ಯಗಳ ನೆರವು ಕೋರಿದೆ. ಕೇರಳದಲ್ಲಿ ಆಗಸ್ಟ್ ಮಧ್ಯಭಾಗದಿಂದ ಇಲಿ ಜ್ವರದ ಪ್ರಕರಣಗಳ ಸಂಖ್ಯೆ 800ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ವಕ್ತಾರ ತಿಳಿಸಿದ್ದಾರೆ.

ಸೋಂಕಿತ ಪ್ರಾಣಿಗಳ ಮೂತ್ರದಿಂದ ಹರಡುವ ಈ ರೋಗದ ಮುಖ್ಯ ಲಕ್ಷಣ ಜ್ವರ ಹಾಗೂ ಮಾಂಸ ಖಂಡಗಳಲ್ಲಿ ನೋವು. ಇಲಿಜ್ವರದಿಂದ ಇದುವರೆಗೆ 12 ಜನರು ಸಾವನ್ನಪ್ಪಿರುವುದು ದೃಢಪಟ್ಟಿದೆ. 41 ಮಂದಿ ಇಲಿಜ್ವರದಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ಕೋಝಿಕೋಡ್ ಜಿಲ್ಲೆ ಇಲಿ ಜ್ವರದಿಂದ ತೀವ್ರ ಬಾಧಿತವಾಗಿದೆ. ಆದರೆ, ಇಲ್ಲಿ ರೋಗ ನಿಯಂತ್ರಿಸಲು ಔಷಧದ ಕೊರತೆ ಉಂಟಾಗಿದೆ. ಇದರಿಂದ ಕೆಲವು ಸಾವು ಸಂಭವಿಸಿದೆ. ಕೋಝಿಕೋಡ್ ನಗರಾಡಳಿತಕ್ಕೆ ಮುಂದಿನ ಎರಡು ತಿಂಗಳು 3 ದಶಲಕ್ಷ ಮಾತ್ರೆಗಳ ಅಗತ್ಯವಿದೆ. ಆದರೆ, ಪ್ರಸ್ತುತ 50,000 ಮಾತ್ರೆಗಳು ಮಾತ್ರ ದಾಸ್ತಾನು ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಆರ್.ಎಸ್ ಗೋಪಕುಮಾರ್ ತಿಳಿಸಿದ್ದಾರೆ. ಔಷಧಕ್ಕಾಗಿ ರಾಜ್ಯ ಸರಕಾರ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದ ನೆರವು ಕೋರಿದೆ ಎಂದು ಗೋಪಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News