ಆಳ್ವಾಸ್‍ನಲ್ಲಿ 'ನ್ಯಾಷನಲ್ ನ್ಯೂಸ್ಟ್ರೀಷಿಯನ್ ವೀಕ್'

Update: 2018-09-05 17:45 GMT

ಮೂಡುಬಿದಿರೆ, ಸೆ.5: “ಮಾನವನ ಮೂಲಭೂತ ಸೌಕರ್ಯಗಳಲ್ಲಿ ಆಹಾರವು ಒಂದು. ಆದರೆ ನಮ್ಮ ದೇಶದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು” ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ, ಡಾ.ಕುರಿಯನ್ ಹೇಳಿದರು.

ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನರ್ ಸಭಾಂಗಣದಲ್ಲಿ ಸ್ನಾತಕೋತ್ತರ ಫುಡ್‍ ಸೈನ್ಸ್ ಆ್ಯಂಡ್ ನ್ಯೂ ಸ್ಟ್ರೀಷಿಯನ್ ವಿಭಾಗದ ವತಿಯಿಂದ “ನ್ಯಾಷನಲ್ ನ್ಯೂಸ್ಟ್ರೀಷಿಯನ್ ವೀಕ್” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

“ಆರೋಗ್ಯಯುತ ದೇಹಕ್ಕೆ ಉತ್ತಮ ಪೌಷ್ಠಿಕಾಂಶದ ಅವಶ್ಯವಾಗಿದೆ. ಇಂದು ಆಹಾರ ಪದ್ದತಿಯೆಲ್ಲವೂ ಬದಲಾಗುತ್ತ ಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಹೆಚ್ಚಾಗಿ ಕಾಡುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕ. ವಿದ್ಯಾರ್ಥಿಗಳಾದ ನೀವು ನಿಮ್ಮ ಕಲಿಕೆಯನ್ನು ವ್ಯವಹಾರ ಅಥವಾ ಲಾಭಕ್ಕೋಸ್ಕರ ಮಾಡದೇ ಆಹಾರದ ಮೌಲ್ಯವನ್ನು ಅರಿತು ಕಾರ್ಯನಿರ್ವಹಿಸುವುದು ಅವಶ್ಯ” ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ “ಇಂದು ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ವಿದ್ಯಾರ್ಥಿಗಳು ಆಹಾರದ ಮೌಲ್ಯ, ಗುಣಮಟ್ಟ, ಮಿತವ್ಯಯದ ಕುರಿತು ಜನರಿಗೆ ಸರಿಯಾದ ಮಾರ್ಗದರ್ಶನವನ್ನು  ಈ ವೇದಿಕೆಯ ಮೂಲಕ ನೀಡಬೇಕು. ಅದಕ್ಕಾಗಿ ಸಂಶೋಧನೆ ಮತ್ತು  ಹೊಸ ಯೋಜನೆಗಳನ್ನು ರೂಪಿಸುವುದು ಅಗತ್ಯ ಎಂದರು. ವಿದ್ಯಾರ್ಥಿಗಳು ವಿಷಯಕ್ಕೆ ಸಂಬಂದಿಸಿದ ವಿಷಯಗಳನ್ನು ಅಧ್ಯಯನ ಮಾಡಲು ಕಾಲೇಜಿನ ಲ್ಯಾಬ್ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.

`ನ್ಯೂಟ್ರಿಕೋ' ಎಂಬ ನಾಮಾಂಕಿತದಡಿ ಆಯೋಜನೆ ಆಗಿದ್ದ ಕಾರ್ಯಕ್ರಮದಲ್ಲಿ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷಿಯನ್ ಕುರಿತಾದ ಹಲವು ಭಿತ್ತಿಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿವಿಧ ಪೌಷ್ಠಿಕಾಂಶಯುತ ಆಹಾರಗಳನ್ನು ತಯಾರಿಸಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಫುಡ್‍ ಸೈನ್ಸ್ ಆ್ಯಂಡ್ ನ್ಯೂ ಟ್ರಿಷಿಯನ್ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ ಪ್ರಭಾತ್, ಡಾ ನವೀನ್ ಕುಮಾರ ವಿ ಉಪಸ್ಥಿತರಿದ್ದರು.

ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷಿಯನ್ ವಿಭಾಗದಿಂದ ಶ್ರೇಷ್ಠ ಗುಣಮಟ್ಟದ  ವಿದ್ಯಾರ್ಥಿ ಯೋಜನೆಗಳನ್ನು ತಯಾರಿಸಲು ಪ್ರೋತ್ಸಾಹಕ ಧನದ ರೂಪದಲ್ಲಿ ಐದು ಯೋಜನೆಗಳಿಗೆ ಸಂಸ್ಥೆಯ ವತಿಯಿಂದ ತಲಾ 5000ರೂ.ಗಳನ್ನು ನೀಡಲಾಗುವುದು.
-ವಿವೇಕ್ ಆಳ್ವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News