ಮೂಡುಬಿದಿರೆ; ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಖೋ ಖೋ ತಂಡಗಳು ಜಿಲ್ಲಾ ಮಟ್ಟಕ್ಕೆ !

Update: 2018-09-05 18:22 GMT

ಮೂಡುಬಿದಿರೆ, ಸೆ. 5: 60ರ ಸಂಭ್ರಮದಲ್ಲಿರುವ ನೀರ್ಕೆರೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸೆ. 4ರಂದು ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಖೋ ಖೋ ಸ್ಪರ್ಧೆಯ ಆತಿಥೇಯತ್ವ ವಹಿಸಿಕೊಂಡ ನೀರ್ಕೆರೆ ಶಾಲೆಯ ಹುಡುಗರು ಮತ್ತು ಹುಡುಗಿಯರ ತಂಡಗಳು ಪ್ರಥಮ ಬಹುಮಾನ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ.

 ಈ ಗೆಲುವಿನ ಹಿಂದೆ ಶಾಲಾ ಹಳೆವಿದ್ಯಾರ್ಥಿಗಳಾದ ಮನಮೋಹನ, ರೂಪೇಶ,ಯಾದವ ಮತ್ತು ಸಂಗಡಿಗರು ನೀಡಿದ ತರಬೇತಿ, ಪರಿಶ್ರಮ ಇದೆ ಎಂದು ಮುಖ್ಯೋಪಾಧ್ಯಾಯಿನಿ ಯಮುನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News