ಶೀಘ್ರವೇ ಜಗತ್ತಿನ ಐದನೆ ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿ ಪಾಕ್

Update: 2018-09-06 16:26 GMT

►  2020ರೊಳಗೆ ಅದರ ಅಣ್ವಸ್ತ್ರ ಬತ್ತಳಿಕೆಯಲ್ಲಿ 225 ಸಿಡಿತಲೆಗಳಿರುವ ಸಾಧ್ಯತೆ

ವಾಶಿಂಗ್ಟನ್,ಸೆ.5: ಪಾಕಿಸ್ತಾನವು ಶೀಘ್ರದಲ್ಲೇ ಜಗತ್ತಿನ ಐದನೇ ಅಣ್ವಸ್ತ ಶಕ್ತ ರಾಷ್ಟವಾಗಲಿದೆಯೆಂದು ಅಮೆರಿಕದ ರಕ್ಷಣಾ ಸಂಸ್ಥೆಯೊಂದರ ವರದಿ ತಿಳಿಸಿದೆ. ಪಾಕಿಸ್ತಾನವು ಪ್ರಸ್ತುತ 120ರಿಂದ 145 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದೆ. ಪಾಕ್ ಇದೇ ಪ್ರವೃತ್ತಿಯನ್ನು ಮುಂದುವರಿಸಿದಲ್ಲಿ ಅದರ ಶಸ್ತ್ರಾಸ್ತ್ರ ದಾಸ್ತಾನಿನಲ್ಲಿರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯಲ್ಲಿ 220ರಿಂದ 225ರಷ್ಟು ಏರಿಕೆ ಯಾಗಲಿದೆಯೆಂದು ಅಮೆರಿಕದ ರಕ್ಷಣಾ ಗುಪ್ತಚರ ಏಜೆನ್ಸಿ ಅಂದಾಜಿಸಿದೆ.

 ಆದರೆ ಪ್ರಸಕ್ತ ಅಂದಾಜಿನ ಪ್ರಕಾರ ಈಗ ಪಾಕಿಸ್ತಾನವು 120ರಿಂದ 145 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಲಿದೆ. ಆದರೆ 2020ರೊಳಗೆ 60ರಿಂದ 80ರಷ್ಟು ಅಧಿಕ ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಲಿದೆಯೆಂಬ ಏಜೆನ್ಸಿ ವರದಿಯಲ್ಲಿ ತಿಳಿಸಿದೆ.

 ‘‘2025ರೊಳಗೆ ಪಾಕಿಸ್ತಾನದ ಅಣ್ವಸ್ತ್ರ ಸಿಡಿತಲೆ ದಾಸ್ತಾನು 220ರಿಂದ 250ರಷ್ಟು ಅಧಿಕವಾಗಿದೆಯೆಂದು ನಾವು ಅ ಅಂದಾಜಿಸಿದ್ದೇವೆ. ಆದರೆ ಈ ಪ್ರವೃತ್ತಿ ಮುಂದುವರಿದಲ್ಲಿ ಪಾಕಿಸ್ತಾನವು ಜಗತ್ತಿನಲ್ಲೇ ಐದನೇ ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿ ಹೊರಹೊಮ್ಮಲಿದೆ’’ ಎಂದು ‘ಪಾಕಿಸ್ತಾನ್ ನ್ಯೂಕ್ಲಿಯರ್ ಫೋರ್ಸಸ್ 2018’ ಎಂಬ ವರದಿಯಲ್ಲಿ ರಕ್ಷಣಾ ತಜ್ಞರಾದ ಹ್ಯಾನ್ಸ್ ಎಂ.ಕ್ರಿಸ್ಟೆನ್‌ಸೆನ್, ರಾಬರ್ಟ್ ಎಸ್. ನೊರಿಸ್ ಹಾಗೂ ಜೂಲಿಯಾ ಡೈಮಂಡ್ ತಿಳಿಸಿದ್ದಾರೆ.

ಕಳೆದ ಒಂದು ದಶಕದಿಂದ ಪಾಕಿಸ್ತಾನದ ಅಣ್ವಸ್ತ್ರ ಭದ್ರತೆ ಕುರಿತಾದ ಅಮೆರಿಕದ ಅಂದಾಜಿಸುವಿಕೆಯು ಗಣನೀಯವಾಗಿ ಬದಲಾಗುತ್ತಿದೆ ಎಂದು ವರದಿ ತಿಳಿಸಿದೆ.

 ‘‘ ಪಾಕಿಸ್ತಾನದಲ್ಲಿ ನಾಲ್ಕು ಪ್ಲುಟೋನಿಯಂ ಉತ್ಪಾದನಾ ರಿಯಾಕ್ಟರ್‌ಗಳಿವೆ ಹಾಗೂ ಅದರ ಯುರೇನಿಯಂ ಸಂವರ್ಧನೆಯ ಸ್ಥಾವರಗಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಅದು ಇನ್ನಷ್ಟು ಅಧಿಕಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಮಿಲಿಟರಿ ಬೆದರಿಕೆಗಳನ್ನು ಎದುರಿಸುವ ಉದ್ದೇಶದಿಂದ ಪಾಕಿಸ್ತಾನವು ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಅಣ್ವಸ್ತ್ರ ಸಾಮರ್ಥ್ಯದಲ್ಲಿ ಸುಧಾರಣೆಯನ್ನು ತರುತ್ತಿದೆಯೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News