ಪೆರ್ನೋಡಿ : ಬೈಕ್‍ನಿಂದ ಬಿದ್ದು ಮೃತ್ಯು

Update: 2018-09-06 16:44 GMT

ಮೂಡುಬಿದಿರೆ, ಸೆ.6: ಕೂಲಿ ಕಾರ್ಮಿಕರೊಬ್ಬರು ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ಮೃತಪಟ್ಟ ಘಟನೆ ನೆಲ್ಲಿಕಾರಿನ ಪೆರ್ನೋಡಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಮಾಂಟ್ರಾಡಿ ನಿವಾಸಿ ರಾಜು ಕೋಟ್ಯಾನ್(42)ಎಂದು ಗುರುತಿಸಲಾಗಿದೆ. ಇವರು ಬುಧವಾರ ಬೆಳಗ್ಗೆ ನಾರಾಯಣ ಪೂಜಾರಿ ಅವರ ಜತೆ ಬೈಕ್‍ನಲ್ಲಿ ಬಜಗೋಳಿಗೆ ಕೂಲಿ ಕೆಲಸಕ್ಕೆ ಹೊರಟಿದ್ದು ಬೈಕ್‍ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ನೆಲ್ಲಿಕಾರಿನ ಪೆರ್ನೋಡಿಯಲ್ಲಿ ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ರಾಜು ಕೋಟ್ಯಾನ್ ಅವರ ತಲೆಗೆ ಗಂಭೀರ ಏಟು ಬಿದ್ದು ಮೃತಪಟ್ಟರೆನ್ನಲಾಗಿದೆ. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News