ಸೆ.9: ಪುಸ್ತಕ ಬಿಡುಗಡೆ, ಏಕವ್ಯಕ್ತಿ ಪ್ರದರ್ಶನ
Update: 2018-09-06 23:33 IST
ಉಡುಪಿ, ಸೆ.6: ಪ್ರತಿಭಾವಂತ ರಂಗನಟ, ನಿರ್ದೇಶಕ ಹಾಗೂ ಕಿರುಚಿತ್ರ ನಟರಾದ ಕೃಷ್ಣಮೂರ್ತಿ ಕವತ್ತಾರ್ ಅವರ ವ್ಯಕ್ತಿಚಿತ್ರ ಕುರಿತು ಚಾರುಮತಿ ಪ್ರಕಾಶನ ಪ್ರಕಟಿಸಿದ ಪುಸ್ತಕದ ಲೋಕಾರ್ಪಣೆ ಸೆ.9ರ ರವಿವಾರ ಸಂಜೆ 6:30ಕ್ಕೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಕೃತಿ ಬಿಡುಗಡೆಗೊಳಿಸುವರು. ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೊ.ಮುರಳೀಧರ ಉಪಾಧ್ಯ ಕೃತಿ ಪರಿಚಯ ಮಾಡುವರು. ಅತಿಥಿಗಳಾಗಿ ಡಾ. ಭಾಸ್ಕರಾನಂದ ಕುಮಾರ್, ಗುರು ಬನ್ನಂಜೆ ಸಂಜೀವ ಸುವರ್ಣ ಹಾಗೂ ಹರಿಶ್ಚಂದ್ರ ಶೆಟ್ಟಿ ಕರ್ನಿರೆ ಭಾಗವಹಿಸುವರು. ಕಾರ್ಯಕ್ರಮದ ಬಳಿಕ ಕೃಷ್ಣಮೂರ್ತಿ ಕವತ್ತಾರರಿಂದ 116ನೇ ಏಕವ್ಯಕ್ತಿ ಪ್ರಯೋಗ ‘ಸಾಯುವನೇ ಚಿರಂಜೀವಿ’ ಪ್ರದರ್ಶನಗೊಳ್ಳಲಿದೆ ಎಂದು ಸಂಯೋಜಕ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.