ತೆಂಕ ಎರ್ಮಾಳ್: 35.45 ಲಕ್ಷ ವೆಚ್ಚದಲ್ಲಿ ವಿದ್ಯುದ್ದೀಕರಣ

Update: 2018-09-06 18:09 GMT

ಪಡುಬಿದ್ರೆ, ಸೆ.6: ಯುಪಿಸಿಎಲ್ ಸಂಸ್ಥೆಯು ಸಿಎಸ್‌ಆರ್ ಯೋಜನೆಯ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ತೆಂಕ ಗ್ರಾಪಂ ವ್ಯಾಪ್ತಿಯ ಸಮುದ್ರ ತೀರದ ಫಿಶರೀಸ್ ರಸ್ತೆಗೆ 35.45 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ವಿದ್ಯುತ್ ದೀಪಗಳಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹಾಗೂ ತೆಂಕ ಗ್ರಾಪಂ ಅಧ್ಯಕ್ಷೆ ಅರುಣಾ ಕುಮಾರಿ ವಿದ್ಯುತ್ ದೀಪವನ್ನು ಸ್ವಿಚ್-ಆನ್ ಮಾಡುವುದರ ಮೂಲಕ ಲೋಕಾರ್ಪಣೆಗೈದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಕಿಶೋರ್ ಕುಮಾರ್, ಪಿಡಿಓ ಆಶಾಲತಾ, ಸದಸ್ಯರಾದ ರತ್ನಾಕರ ಕೋಟಿಯಾನ್, ಶಿವಪ್ರಸಾದ್ ಶೆಟ್ಟಿ, ವಿನಯ ಶೆಟ್ಟಿ, ಗುಣವತಿ ಕಾಂಚನ್, ಶ್ಯಾಮಲಾ, ಯುಪಿಸಿಎಲ್ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ಫೌಂಡೇಷನ್‌ನ ಸದಸ್ಯರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ, ಗುತ್ತಿಗೆದಾರ ಜಯೇಂದ್ರ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News