ಸೆ.9: ಬ್ಯಾರಿ ಸಾಂಸ್ಕೃತಿಕ ಉತ್ಸವ

Update: 2018-09-06 18:17 GMT

ಮಂಗಳೂರು, ಸೆ.6: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಸೆ.9ರಂದು ಸಂಜೆ 4 ಗಂಟೆಗೆ ನಗರದ ಫೋರಂ ಫಿಝಾ ಮಾಲ್ ವಠಾರದಲ್ಲಿ ಬ್ಯಾರಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬ್ಯಾರಿ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮದ್ ಅಧ್ಯಕ್ಷತೆ ವಹಿಸಲಿರುವರು. ವಿಧಾನ ಪರಿಷತ್ ಶಾಸಕ ಬಿ.ಎಂ. ಫಾರೂಕ್ ಬ್ಯಾರಿ ತ್ರೈಮಾಸಿಕ ‘ಬೆಲ್ಕಿರಿ’ ಬಿಡುಗಡೆ ಮಾಡಲಿದ್ದಾರೆ. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ.ಮೋನು ಕಣಚೂರು, ಡಾ.ಮೋಹನ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖಾಲಿದ್ ಅಖ್ತರ್ ಬಳಗದಿಂದ ಬ್ಯಾರಿ ಪಾಟ್, ಬ್ಯಾರಿ ಖವ್ವಾಲಿ, ಮುಹಮ್ಮದ್ ಇಸ್ಮಾಯೀಲ್ ಬಳಗದಿಂದ ಸ್ಮೈಲ್ ಒಪ್ಪನ ಮೊಂಜತ್ತೀಸ್ ಒಪ್ಪನೆ ಪಾಟ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News