ಸ್ವಸ್ಥ ಶ್ವಾಸ ಆರೋಗ್ಯದ ಲಕ್ಷಣ : ಡಾ. ಪ್ರಭಾ ಅಧಿಕಾರಿ

Update: 2018-09-07 12:42 GMT

ದೇರಳಕಟ್ಟೆ,ಸೆ.7:  ಹುಟ್ಟಿನಿಂದ ಸಾವಿನವರೆಗೆ ಆರೋಗ್ಯ ಕಾಪಾಡುವುದರಲ್ಲಿ ಶ್ವಾಸಕೋಶ ಪ್ರಮುಖ ಪಾತ್ರವಹಿಸುತ್ತದೆ. ಶ್ವಾಸಕೋಶದ ಆರೋಗ್ಯ ಸಮಸ್ಯೆಗೆ ಆಧುನಿಕ ವೈದ್ಯಕೀಯ ಚಿಕಿತ್ಸೆಯೊಂದಿಗೆ ಪ್ರಾಚೀನ ಅಭ್ಯಾಸವಾದ ಯೋಗ ಪ್ರಾಣಾಯಾಮ ಖಾಯಿಲೆಗೆ ಪರಿಹಾರ ನೀಡಬಲ್ಲದು ಎಂದು ಯೆನೆಪೋಯ ಮೆಡಿಕಲ್ ಕಾಲೇಜು ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರಭಾ ಅಧಿಕಾರಿ ಅಭಿಪ್ರಾಯ ಪಟ್ಟರು. 

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶ್ವಾಸಕೋಶ ಚಿಕಿತ್ಸಾ ವಿಭಾಗ ಮತ್ತು ಮಾರ್ಕೆಟಿಂಗ್ ವಿಭಾಗ ಜಂಟಿಯಾಗಿ ಆಯೋಜಿಸಿದ ಶ್ವಾಸಕೋಶ ಆರೋಗ್ಯ ತಪಾಸಣೆ ಹಾಗೂ ಯೋಗ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ವಾಸಕೋಸ ವಿಭಾಗದ ಮುಖ್ಯಸ್ಥ ಡಾ. ಇರ್ಫಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಧೂಮಪಾನ ಶ್ವಾಸಕೋಶದ ದಕ್ಷತೆಯನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿಸಿದರು.

ಡಾ. ಪ್ರೀತಿರಾಜ್ ಬಳ್ಳಾಲ್ ಶ್ವಾಸಕೋಶಕ್ಕೆ ಸಂಬಂದಿಸಿದ ಕಾಯಿಲೆಗಳು ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಸಾಕ್ಷಚಿತ್ರ ಮುಖೇನ ವಿವರಿಸಿದರು. ಯೋಗ ಶಿಕ್ಷಕ ಕುಶಾಲಪ್ಪ ಗೌಡ ಯೋಗ ಚಿಕಿತ್ಸೆ  ಬಗ್ಗೆ ಮಾಹಿತಿ ನೀಡಿದರು.

ಮಾರ್ಕೆಟಿಂಗ್ ವಿಭಾಗದ ವಿಜಯಾನಂದ ಶೆಟ್ಟಿ ಧನ್ಯವಾದಗೈದರು. ಡಾ. ಶರತ್ ಕೆ. ಎಸ್ ನಿರೂಪಣೆಗೈದರು.

ಯೋಗ ಚಿಕಿತ್ಸಾ ಸಿಬಿರವು ಸೆಪ್ಟೆಂಬರ್ 10 ರಿಂದ ಅಕ್ಟೋಬರ್10 ರವರೆಗೆ ನಡೆಯಲಿದೆ. ಸಾರ್ವಜನಿಕರಿಗೆ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ  ಯೋಗಚಿಕಿತ್ಸೆ ತರಬೇತಿ ಶಿಬಿರವು ಸಂಜೆ 4 ರಿಂದ 5 ಮತ್ತು 5 ರಿಂದ 6 ರ ವರೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News