‘ಸೋನಾಲಿ ಬೇಂದ್ರೆ ನಿಧನ’ ಎಂಬ ಸುಳ್ಳು ಸುದ್ದಿ ಶೇರ್ ಮಾಡಿದ ಬಿಜೆಪಿ ಶಾಸಕ

Update: 2018-09-07 13:21 GMT

ಹೊಸದಿಲ್ಲಿ, ಸೆ.7: ಯುವತಿಯರನ್ನು ಅಪಹರಿಸುತ್ತೇನೆ ಎಂದು ಭಾಷಣ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡ ಬಿಜೆಪಿ ಶಾಸಕ ರಾಮ್ ಕದಮ್ ಮತ್ತೊಂದು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ವಾಟ್ಸ್ ಆ್ಯಪ್ ನಲ್ಲಿ ಫಾರ್ವರ್ಡ್ ಆಗಿ ಬಂದ ನಟಿ ಸೋನಾಲಿ ಬೇಂದ್ರೆ ನಿಧನ ಎಂಬ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ ಬಿಜೆಪಿ ಶಾಸಕ ಟ್ವಿಟರಿಗರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. “ಹಿಂದಿ ಮತ್ತು ಮರಾಠಿ ಸಿನಿರಂಗವನ್ನು ಆಳಿದ, ಎಲ್ಲರ ಪ್ರೀತಿಯ ಸೊನಾಲಿ ಬೇಂದ್ರೆ ಇನ್ನಿಲ್ಲ” ಎಂದು ಫಾರ್ವರ್ಡ್ ಮೆಸೇಜ್ ನಲ್ಲಿ ಬರೆಯಲಾಗಿತ್ತು. ಅದನ್ನೇ ಶಾಸಕರು ಶೇರ್ ಮಾಡಿದ್ದಾರೆ.

ಆನಂತರ ಮತ್ತೊಂದು ಟ್ವೀಟ್ ಮಾಡಿದ ಕದಮ್ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News