ಆಯುಷ್ಮಾನ್ ಭಾರತ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಶ್ಲಾಘನೆ

Update: 2018-09-07 15:22 GMT

ಹೊಸದಿಲ್ಲಿ, ಸೆ.7: ದೇಶದ 50 ಕೋಟಿ ಜನರಿಗೆ ವಾರ್ಷಿಕ ತಲಾ ಐದು ಲಕ್ಷ ರೂ. ವಿಮೆಯನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿಯ ಆಯುಷ್ಮಾನ್ ಭಾರತ ಯೋಜನೆಯನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೊಸ್ ಗೆಬ್ರಿಯೆಸಸ್, ಈ ಯೋಜನೆಯನ್ನು ಅತ್ಯುತ್ತಮ ಬದ್ಧತೆ ಎಂದು ವ್ಯಾಖ್ಯಾನಿಸಿದ್ದಾರೆ.

ಜಗತ್ತಿನ ಅತೀದೊಡ್ಡ ಆರೋಗ್ಯಸೇವೆ ಯೋಜನೆಯೆಂದು ವ್ಯಾಖ್ಯಾನಿಸಲಾಗಿರುವ ಈ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಭಾರತದ ಹತ್ತು ಕೋಟಿ ಬಡಕುಟುಂಬಗಳು ಲಾಭಪಡೆಯಲಿವೆ. ನಿರ್ದೇಶಕರಿಗೆ ಧನ್ಯವಾದ ತಿಳಿಸಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಎಲ್ಲರಿಗೂ ಆರೋಗ್ಯಸೇವೆ ಲಭಿಸುವಂತೆ ಮಾಡುವುದು ಪ್ರಧಾನಿ ಮೋದಿಯ ಕನಸಾಗಿದೆ ಎಂದು ತಿಳಿಸಿದ್ದಾರೆ. ಈ ವರ್ಷ ಸ್ವಾತಂತ್ರ ದಿನದಂದು ಕೆಂಪುಕೋಟೆಯ ಮೇಲಿಂದ ಭಾಷಣ ಮಾಡಿದ ಪ್ರಧಾನಿ ಮೋದಿ, ಸೆಪ್ಟಂಬರ್ 5ರಂದು ಪಂಡಿತ್ ದೀನದಯಾಳ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಆಯುಷ್ಮಾನ್ ಭಾರತ ಯೋಜನೆಗೆ ಚಾಲನೆ ನೀಡುವುದಾಗಿ ಘೋಷಿಸಿದ್ದರು.

ಈ ಯೋಜನೆಯಲ್ಲಿ ಬಡ, ವಂಚಿತ ಗ್ರಾಮೀಣ ಕುಟುಂಬಗಳಿಗೆ ಆರೋಗ್ಯಸೇವೆಯನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಯೋಜನೆಯಲ್ಲಿ ನಗರ ಕಾರ್ಮಿಕ ಕುಟುಂಬಗಳನ್ನು ಗುರುತಿಸಲಾಗಿದ್ದು, ಇತ್ತೀಚಿನ ಸಾಮಾಜಿಕ ಆರ್ಥಿಕ ಜನಗಣತಿಯ ಅಂಕಿಅಂಶದ ಪ್ರಕಾರ, ಗ್ರಾಮೀಣ ಭಾಗದಲ್ಲಿ 8.03 ಕೋಟಿ ನಗರ ಕಾರ್ಮಿಕ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ 2.33 ಕೋಟಿ ಇಂಥ ಕುಟುಂಬಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News