ರಾಮ್ ಕದಮ್ ಬಿಜೆಪಿಯ ಅಲ್ಲಾವುದ್ದೀನ್ ಖಿಲ್ಜಿ: ಶಿವಸೇನೆ

Update: 2018-09-07 15:32 GMT

ಮುಂಬೈ, ಸೆ. 7: ನೀವು ಇಷ್ಟಪಟ್ಟ ಯುವತಿಯನ್ನು ತಾನು ಅಪಹರಿಸುವೆ ಎಂದು ಯುವಕರಲ್ಲಿ ಹೇಳಿದ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರನ್ನು ಶಿವಸೇನೆ ದಿಲ್ಲಿಯ 13ನೇ ಶತಮಾನದಲ್ಲಿ ಜೀವಿಸಿದ್ದ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಗೆ ಹೋಲಿಸಿದೆ ಹಾಗೂ ಈ ಹೇಳಿಕೆ ಕುರಿತ ಬಿಜೆಪಿಯ ಮೌನವನ್ನು ಪ್ರಶ್ನಿಸಿದೆ.

ತ್ರಿವಳಿ ತಲಾಕ್‌ನಲ್ಲಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕೆಲಸ ಮಾಡಿದ್ದರು. ಆದರೆ, ಅವರ ಪಕ್ಷದ ಮಹಾರಾಷ್ಟ್ರದ ಶಾಸಕ ರಾಜ್ಯದ ಮಹಿಳೆಯರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ ಎಂದರು.

ರಾಣಿ ಪದ್ಮಿನಿ ತನ್ನ ಗೌರವ ಹಾಗೂ ಧರ್ಮ ಉಳಿಸಲು ಸಾವಿರಾರು ರಜಪೂತ ರಾಣಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಲ್ಲಾವುದ್ದೀನ್ ಖಿಲ್ಜಿ ಹಾಗೂ ಆತನ ದೌರ್ಜನ್ಯದ ವಿರುದ್ಧ ನಡೆದ ಈ ಸಾಮೂಹಿಕ ಆತ್ಮಹತ್ಯೆ ಈಗಲೂ ಭಾರತದ ಮಹಿಳೆಯರಿಗೆ ಸ್ಪೂರ್ತಿ. ಆದರೆ, ಈಗ ಬಿಜೆಪಿಯ ಖಿಲ್ಜಿಯಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ಹೇಳಿದೆ.

ಬಿಜೆಪಿ ಯುವಕರಿಗೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದೆ? ಇದು ಹಿಂದೂ ಸಂಸ್ಕೃತಿಯೇ? ಎಂದು ಸೇನೆ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News