ಮಾಲ್ದೀವ್ಸ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ವಿಮಾನ

Update: 2018-09-07 17:25 GMT

ಮಾಲೆ (ಮಾಲ್ದೀವ್ಸ್), ಸೆ. 7: 136ಕ್ಕೂ ಹೆಚ್ಚು ಮಂದಿಯನ್ನು ಹೊತ್ತು ಮಾಲ್ದೀವ್ಸ್‌ಗೆ ಹೋಗುತ್ತಿದ್ದ ಏರ್ ಇಂಡಿಯ ವಿಮಾನವೊಂದು ಶುಕ್ರವಾರ ಮಾಲೆ ವಿಮಾನ ನಿಲ್ದಾಣದಲ್ಲಿ ಬೇರೆ ರನ್‌ವೇಯಲ್ಲಿ ಇಳಿದಿದೆ ಎಂದು ಏರ್‌ಲೈನ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ಎ320 ನಿಯೊ ವಿಮಾನವು ತಿರುವನಂತಪುರಂನಿಂದ ಮಾಲೆಗೆ ತೆರಳುತ್ತಿತ್ತು.

ವಿಮಾನವು ನಿರ್ಮಾಣ ಹಂತದಲ್ಲಿರುವ ರನ್‌ವೇಯಲ್ಲಿ ಇಳಿದಿದೆ ಎಂದು ಅವರು ಹೇಳಿದರು.

ವಿಮಾನದಲ್ಲಿ 136 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು.

ವಿಮಾನವನ್ನು ನಿಲುಗಡೆ ಸ್ಥಳಕ್ಕೆ ಎಳೆದುಕೊಂಡು ಹೋಗಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News