ಮಾತೃಭಾಷೆ ಕಲಿಕೆಯಿಂದ ಮನುಷ್ಯತ್ವ ಅರ್ಥೈಸಲು ಸಾಧ್ಯ: ಡಾ.ಕೊಡಗುಂಟೆ

Update: 2018-09-07 17:59 GMT

ಉಡುಪಿ, ಸೆ.7: ಶಿಕ್ಷಣ ಮನುಷ್ಯನಾಗಿ ಬದುಕಲು ಕಲಿಸುತ್ತದೆ. ಮನುಷ್ಯತ್ವ ವನ್ನು ಅರ್ಥೈಸಿಕೊಳ್ಳಲು ಮಾತೃಭಾಷೆಯಲ್ಲಿ ಕಲಿಕೆ ಅನಿವಾರ್ಯ. ಮಾತೃ ಭಾಷಾ ಶಿಕ್ಷಣ ಅಭಿವೃದ್ದಿಗೆ ಪೂರಕವಾಗಿದೆಂದು ಗುಲ್ಬರ್ಗ ಕೇಂದ್ರೀಯ ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಬಸವರಾಜ ಕೊಡಗುಂಟೆ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಲಾದ ಪ್ರೊ.ಯು.ಎಲ್.ಆಚಾರ್ಯ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ವಹಿಸಿದ್ದರು. ಪ್ರೊ.ಯು.ಎಲ್.ಆಚಾರ್ಯರ ಸಹೋದರ ಶ್ರೀಧರಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಪ್ರಾದ್ಯಪಕಿ ಶೈಲಜ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News