ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Update: 2018-09-07 18:04 GMT

ಉಡುಪಿ, ಸೆ.7: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಡಾ.ಜೆರಾಲ್ಡ್ ಪಿಂಟೋ, ನಿವೃತ್ತ ಶಿಕ್ಷಕರಾದ ಕೆಮ್ಮಣ್ಣಿನ ರಾಮಪ್ಪ ಮಾಸ್ಟರ್, ಹೂಡೆಯ ಅಕ್ಬರ್ ಮಾಲಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಾಲಿಹಾತ್ ಪ್ರಾಥಮಿಕ ಶಾಲಾ ಶಿಕ್ಷಕಿ ಶಾದತ್ ಆಸೀಫ್ ಇವರನ್ನು ಅಭಿನಂದಿಸಲಾಯಿತು.

ಮನೆಯಲ್ಲಿ ತಂದೆ ತಾಯಿಗೆ ನೀಡುವ ಗೌರವವನ್ನು ಶಾಲೆಯಲ್ಲಿ ಮಕ್ಕಳು ಗುರುಗಳಿಗೆ ನೀಡಬೇಕು. ಶಿಕ್ಷಕರು ತಮ್ಮ ವೃತ್ತಿಯನ್ನು ವ್ಯವಹಾರ ದೃಷ್ಠಿಯಿಂದ ನೋಡದೆ ನಿಸ್ವಾರ್ಥ ಮನೋಭಾವದಿಂದ ಶೈಕ್ಷಣಿಕ ಸೇವೆ ಮಾಡಬೇಕು ಎಂದು ಡಾ.ಜೆರಾಲ್ಡ್ ಪಿಂಟೋ ಹೇಳಿದರು.

ಅಧ್ಯಕ್ಷತೆಯನ್ನು ಟ್ರಸ್ಟ್‌ನ ಕಾರ್ಯದರ್ಶಿ ಜಿ.ಇಮ್ತಿಯಾಝ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಟ್ರಸ್ಟಿಗಳಾದ ಮೌಲಾನಾ ಆದಂ ಸಾಹೇಬ್, ಹುಸೇನ್ ಮಾಸ್ಟರ್, ಸಲಹೆಗಾರ ಅಜೀಝ್ ಆದಿ ಉಡುಪಿ, ಶಾಲಾ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಕಾಲೇಜಿನ ಪ್ರಾಂಶುಪಾಲೆ ಡಾ.ಸಬೀನಾ, ಮುಖ್ಯ ಶಿಕ್ಷಕಿಯ ರಾದ ಸುನಂದಾ, ಲವೀನಾ ಕ್ಲಾರಾ, ಸಮೀನಾ ನಝೀರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಿಝಾ ಬಾನು ಸ್ವಾಗತಿಸಿದರು. ಝುಹಾ ಯಾಸ್ಮೀನ್ ವಂದಿಸಿದರು. ವಿದ್ಯಾರ್ಥಿನಿ ಅಫ್‌ನಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News