ಸಾಲಮನ್ನಾ ಗೊಂದಲ ನಿವಾರಣೆಗೆ ಒತ್ತಾಯಿಸಿ ಸಿಎಂಗೆ ಮನವಿ

Update: 2018-09-07 18:21 GMT

ಉಡುಪಿ, ಸೆ.7: ರಾಜ್ಯದ ಸಹಕಾರ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಇರಿಸಿರುವ ನಿರಖು ಠೇವಣಿ ಹಣವನ್ನು ಸಾಲಮನ್ನಾದಲ್ಲಿ ಕಡಿತಗೊಳಿಸುವ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಇಂದು ಉಡುಪಿಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.

ರೈತರು ಕಷ್ಟಪಟ್ಟು ಕೃಷಿ ಚಟುವಟಿಕೆಗಳನ್ನು ಮಾಡಿ, ಉಳಿತಾಯ ಮಾಡಿದ ಸ್ವಲ್ಪಾಂಶ ಹಣವನ್ನು ಸಹಕಾರ ಬ್ಯಾಂಕ್‌ಗಳಲ್ಲಿ ಕಷ್ಟಕಾಲಕ್ಕಾಗಿ ಠೇವಣಿ ಇಟ್ಟಿ ದ್ದಾರೆ. ಇದೀಗ ಸರಕಾರದ ಆದೇಶ ರೈತರಿಗೆ ಸಂಕಷ್ಟ ತಂದಿದೆೆ. ಅದರ ಜೊತೆಗೆ ಬೇರೆ ಆದಾಯದ ಮೂಲ ಇಲ್ಲದೇ ಕೇವಲ ಕೃಷಿಯನ್ನೇ ನಂಬಿರುವ ರೈತರಿಗೂ ಈ ಯೋಜನೆಯ ಪ್ರಯೋಜನ ದೊರೆಯದಂತೆ ಆಗುತ್ತದೆ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.

ಸರಕಾರದ ಈ ನಿರ್ಬಂಧ ರೈತರಿಗಷ್ಟೆ ಮಾತ್ರವಲ್ಲ ಭವಿಷ್ಯದಲ್ಲಿ ಸಹಕಾರಿ ಸಂಘಗಳಿಗೂ ದೊಡ್ಡ ನಷ್ಟವುಂಟು ಮಾಡುವ ಸಾಧ್ಯತೆ ಇದೆ. ಆದುದರಿಂದ ಸಹಕಾರ ಕ್ಷೇತ್ರ ಹಾಗೂ ರೈತರ ಉಳಿವಿಗಾಗಿ ಠೇವಣಿ ಇಟ್ಟಿರುವ ರೈತರ ಸಾಲ ಮನ್ನಾ ಇಲ್ಲ ಎಂಬ ನಿರ್ಬಂಧವನ್ನು ಕೈಬಿಡಬೇಕು. ಎಲ್ಲ ರೈತರಿಗೂ ಸಾಲ ಮನ್ನಾದ ಪ್ರಯೋಜನ ಸಿಗಬೇಕು. ಸಾಲ ಮನ್ನಾದ ಹಣವನ್ನು ಸಹಕಾರ ಸಂಘಗಳಿಗೆ ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಕಿಶನ್ ಹೆಗ್ಡೆ ಕೊಳೆ್ಕಬೈಲ್ ಮನವಿಯಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News