ರಾಜ್ಯ ಕಬಡ್ಡಿ ತಂಡಕ್ಕೆ ಮುಹಮ್ಮದ್ ಮುಫೀದ್ ಆಯ್ಕೆ
Update: 2018-09-07 23:56 IST
ಉಡುಪಿ, ಸೆ.7: ಹಿರಿಯಡ್ಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್‌ನ ಒಂಭತ್ತನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಮುಫೀದ್ 17ವರ್ಷ ಕೆಳಗಿನ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದು, ಇವರು ಪಂಜಾಬ್ ರಾಜ್ಯದಲ್ಲಿ ಸೆ.11 ಮತ್ತು 12ರಂದು ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಹಿರಿಯಡ್ಕ ಪುತ್ತಿಗೆಯ ಝಾಕೀರ್ ಹಾಗೂ ನಝ್ಮಿ ದಂಪತಿ ಪುತ್ರ.