ಮಂಜನಾಡಿ: ಶಾಲೆಗೆ ಆವಶ್ಯಕ ಸಲಕರಣೆ ನೀಡಿ ವಿಜಯೋತ್ಸವ
Update: 2018-09-08 18:45 IST
ಉಳ್ಳಾಲ, ಸೆ.8: ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷದ 6 ಅಭ್ಯರ್ಥಿಗಳ ಜಯಗಳಿಸಿದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಮಂಜನಾಡಿ ವಲಯ ಸಮಿತಿಯ ವತಿಯಿಂದ ಶಾಲಾ ಮಕ್ಕಳಿಗೆ ಆವಶ್ಯಕ ವಸ್ತುಗಳನ್ನು ವಿತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಮಂಜನಾಡಿ ಗ್ರಾಮದ ಕಲ್ಕಟ್ಟ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ವಿದ್ಯಾರ್ಥಿಗಳಿಗೆ ಅವಶ್ಯಕ 10 ಸಾವಿರ ಮೊತ್ತದ ಪೀಠೋಪಕರಣಗಳನ್ನು ವಿತರಿಸ ಲಾಯಿತು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಬಿ. ಮುಹಮ್ಮದ್, ಸದಸ್ಯ ಕೆ.ಕೆ. ಹಸೈನಾರ್, ಎಸ್‌ಡಿಪಿಐ ಮುಖಂಡರಾದ ನೌಷಾದ್ ಕಲ್ಕಟ್ಟ, ಫಯಾಝ್ ಮಂಜನಾಡಿ, ಶಹೀದ್ ಕಲ್ಕಟ್ಟ ಉಪಸ್ಥಿತರಿದ್ದರು.