ಸೆ. 9: ಅಮೆಮಾರ್‌ನಲ್ಲಿ ಮಜ್ಲಿಸುನ್ನೂರ್

Update: 2018-09-08 13:16 GMT

ಮಂಗಳೂರು, ಸೆ.8: ಎಸ್ಕೆಎಸ್‌ಬಿವಿ ಬದ್ರಿಯಾ ಮದ್ರಸ ಅಮೆಮಾರ್ ವತಿಯಿಂದ ಮುಅಲ್ಲಿಂ ಡೇ ಪ್ರಯುಕ್ತ ಸೆ.9ರಂದು ಬೆಳಗ್ಗೆ 8:30ಕ್ಕೆ ಖಬರ್ ಝಿಯಾರತ್, ವಿದ್ಯಾರ್ಥಿ ಸಂಗಮವು ಸದರ್ ಮುಅಲ್ಲಿಂ ಮುಹಿಯುದ್ದೀನ್ ಅಲ್ ಹಸನಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಗ್ರಿಬ್ ನಮಾಝ್ ಬಳಿಕ ಮಜ್ಲಿಸುನ್ನೂರ್ ಹಾಗೂ ದುಆ ಮಜ್ಲಿಸ್ ಮತ್ತು ಸನ್ಮಾನ ಕಾರ್ಯಕ್ರಮವು ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಕಾರ್ಯಕ್ರಮ ಉದ್ಘಾಟಿಸಲ್ಲಿದ್ದಾರೆ.

ಮಜ್ಲಿಸುನ್ನೂರ್‌ಗೆ ಖತೀಬ್ ಅಬೂಸ್ವಾಲಿಹ್ ಫೈಝಿ ನೇತೃತ್ವ ನೀಡಲಿದ್ದಾರೆ ಎಂದು ಇಸ್ಮಾಯೀಲ್ ಯಮಾನಿ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News