ಬಂಟ್ವಾಳ: ಪೌಷ್ಟಿಕ ಆಹಾರ ಸಪ್ತಾಹ, ಮಾತೃವಂದನಾ ಯೋಜನೆ ಕಾರ್ಯಕ್ರಮ

Update: 2018-09-08 13:22 GMT

ಬಂಟ್ವಾಳ, ಸೆ. 8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗ್ರಾಪಂ ನರಿಕೊಂಬು, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ, ಸ್ತ್ರೀ ಶಕ್ತಿ ಗೊಂಚಲು ಶಂಭೂರು ಇದರ ಸಂಯುಕ್ತಾಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಪ್ತಾಹ ಆಚರಣೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಜಾಗ್ರತಿ ಅರಿವು ಕಾರ್ಯಕ್ರಮ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಶಂಭೂರು ವ್ಯಾಯಾಮ ಶಾಲೆಯಲ್ಲಿ ಶನಿವಾರ ನಡೆಯಿತು.

ವೇದಿಕೆಯಲ್ಲಿ ಜಿಪಂ ಸದಸ್ಯೆ ಕಮಲಾಕ್ಷೀ ಕೆ ಪೂಜಾರಿ, ತಾಪಂ ಸದಸ್ಯೆ ಗಾಯತ್ರಿರವೀಂದ್ರ ಸಪಲ್ಯ, ಗ್ರಾಪಂ ಸದಸ್ಯರಾದ ಜಯರಾಜ್, ದಿವಾಕರ ಶಂಭೂರು, ಉದಯ ಶಾಂತಿ, ಹೇಮಲತಾ , ಕಿಶೋರ್ ಶೆಟ್ಟಿ, ನರಿಕೊಂಬು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಿವ, ರಾಮಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಆನಂದ ಶಂಭೂರು, ಬಾಳ್ತಿಲ ಆರೋಗ್ಯ ಕಾರ್ಯಕರ್ತ ವಿರೇಶ್, ಅಂಜನೇಯ ಮಹಿಳಾ ಮಂಡಲ ದ ಅಧ್ಯಕ್ಷೆ ಭವಾನಿ, ಶಂಭೂರು ಗೊಂಚಲಿನ ಅಧ್ಯಕ್ಷೆ ಪುಷ್ಪ ಲತಾ, ಸಂಪನ್ಮೂಲ ವ್ಯಕ್ತಿಗಳಾದ ಬಾಳ್ತಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಘ್ನೇಶ್ವರ ವಿ.ಕೆ., ಬಿ.ಸಿ.ರೋಡು ಶಾಂತ್ವನ ಕೇಂದ್ರದ ಸಿಬ್ಬಂದಿ ಗೀತಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವರ್ಗಾವಣೆ ಗೊಂಡಿರುವ ಶಂಭೂರು ಕೇಂದ್ರ ದ ಕಿರಿಯ ಆರೋಗ್ಯ ಸಹಾಯಕಿ ಸುಮನ ಕ್ರಾಸ್ತ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. 

ಅಂಗನವಾಡಿ ಕಾರ್ಯಕರ್ತೆ ವಾರಿಜ ಜಿ.ಎಸ್.ಸ್ವಾಗತಿಸಿ, ಕಾರ್ಯಕರ್ತೆ ಶಾಂತಿ ವಂದಿಸಿದರು. ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News