ಹಾಸನ : ಉಚಿತ ನೇತ್ರ ತಪಾಸಣಾ ಶಿಬಿರ

Update: 2018-09-08 13:38 GMT

ಹಾಸನ, ಸೆ. 8: ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ವಿ.ಬಿ.ಎಚ್.ಎಂ. ಪೆಟ್ರೋ ಸ್ಟೇಷನ್ ಆಶ್ರಯದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರವು ಇಲ್ಲಿನ ತಣ್ಣೀರುಹಳ್ಳ - ಡಿ.ಎಂ. ಹಳ್ಳ ಸಮೀಪದ ಎಂ.ಎಸ್.ಐ. ಎಲ್ ಶೇಖರಣಾ ಘಟಕದ ಬಳಿ ನಡೆಯಿತು. 

ಶಿಬಿರವನ್ನು ಉದ್ಘಾಟಿಸಿದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ರಿಟೇಲ್ ವಿಭಾಗದ ಮಾರ್ಕೆಟಿಂಗ್ ಅಧಿಕಾರಿ ಅಂಕರ್ ಬಿಸ್ವಾಸ್ ಮಾತನಾಡಿ, ಕಣ್ಣು ದೇಹದ ಬಹು ಮುಖ್ಯವಾದ ಅಂಗಗಳಲ್ಲಿ ಒಂದಾಗಿದ್ದು ಇದರ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಾಗಿದೆ ಎಂದರು. 

ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಅರುಣ್ ಮಾತನಾಡಿ ಉಚಿತವಾಗಿ ಹಮ್ಮಿಕೊಳ್ಳಲಾಗುವ ಇಂತಹ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು. ಕಂಪೆನಿಯು ಮೈಸೂರು ವಿಭಾಗೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಹಾಗೂ ಲಾರಿ ಚಾಲಕರಿಗಾಗಿ ಇಂತಹ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಎಸ್. ಎಸ್. ಎಂ. ಪೆಟ್ರೋ ಸರ್ವಿಸ್ ನ ಮಾಲಕ ವಿ.ಎಚ್.ಸಲೀಂ ಹೇಳಿದರು.

ವಿ.ಬಿ.ಎಚ್.ಎಂ ಪೆಟ್ರೋ ಸ್ಟೇಷನ್ ಮಾಲಕ ಆರ್.ಎಚ್.ಮಧು,ಉದ್ಯಮಿ ಆದರ್ಶ್ ಮೊದಲಾದವರು ಉಪಸ್ಥಿತರಿದ್ದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಖ್ಯಾತ ನೇತ್ರ ತಜ್ನೆ ಡಾ. ಅಶ್ವಿನಿ ಹಾಗೂ ವೈದ್ಯರ ತಂಡ ಶಿಬಿರದಲ್ಲಿ ತಪಾಸಣೆ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News