ದ.ಕ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ

Update: 2018-09-08 14:19 GMT

ಮಂಗಳೂರು, ಸೆ. 8: ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ ದ.ಕ. ಜಿಲ್ಲೆ ಇದರ ಚುನಾವಣಾ ಪ್ರಕ್ರಿಯೆ ಹಾಗೂ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಮಂಗಳೂರಿನ ಕರಾವಳಿ ಸಭಾಭವನದಲ್ಲಿ ಇಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಸಲಹೆಗಾರರಾದ ಫಯಾಝ್ ದೊಡ್ಡಮನೆ ವಹಿಸಿ ಮಾತನಾಡಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಯಾಗಿದ್ದು ಹಲವಾರು ರಾಜಕೀಯ ನಾಯಕರ ವಿವಿಧ ವಿದ್ಯಾರ್ಥಿ ಒಕ್ಕೂಟಗಳು ಅಸ್ತಿತ್ವದಲ್ಲಿದೆ. ವಿದ್ಯಾರ್ಥಿಗಳನ್ನು ತಮ್ಮ ರಾಜಕೀಯ ಚಟುವಟಿಕೆಗಳ ವಸ್ತುವಾಗಿ ಬಳಸಿ ಮತ್ತು  ಹಣದ ವ್ಯಾಮೋಹಕ್ಕೆ ಬಲಿಯಾಗಿಸಿ ನೈಜ ವಿದ್ಯಾರ್ಥಿ ಒಕ್ಕೂಟಗಳ ಮೌಲ್ಯಗಳನ್ನು ಕಸಿಯಲಾಗುತ್ತಿದೆ. ವಿದ್ಯಾರ್ಥಿ ಒಕ್ಕೂಟದ ನೈಜ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಮಗ್ರತೆ, ನಾಯಕತ್ವ ಹಾಗೂ ಅಧಿಕಾರವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸಲು ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಸಂಶೋಧನಾ ವಿದ್ಯಾರ್ಥಿಯಾಗಿರುವ ನಿಯಾಝ್ ಪಣಕಾಜೆ ಮಾತನಾಡಿ ಈ ವಿದ್ಯಾರ್ಥಿ ಒಕ್ಕೂಟವನ್ನು ಮುನ್ನಡೆಸಲು ಉತ್ತಮ ನಾಯಕತ್ವವನ್ನು ಬೆಳೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಪ್ರವೃತ್ತರಾಗಬೇಕು ಎಂದರು.

ಎಸ್.ಡಿ.ಪಿ.ಐ ಮುಖಂಡರಾದ ಜಲೀಲ್ ಕ್ರಷ್ಣಾಪುರ ಮಾತನಾಡಿ ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿ ಒಕ್ಕೂಟಗಳು ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಪರ್ಯಾಯ ವಿದ್ಯಾರ್ಥಿ ಒಕ್ಕೂಟದ ನಿರೀಕ್ಷೆಯಲ್ಲಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಒಕ್ಕೂಟವು ಕೇವಲ ಹೆಸರಿಗೆ ಸೀಮಿತವಾಗದೆ ಸರ್ಕಾರ ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಮಧ್ಯವರ್ತಿಯಾಗಿ ಕಾರ್ಯಚರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾಗಿ ಇಮ್ರಾನ್ ಪಿ.ಜೆ ಉಪಸ್ಥಿತರಿದ್ದರು. ಸಾದಿಕ್ ಕಾರ್ಯಕ್ರಮ ನಿರೂಪಿಸಿ ನಿಝಾಂ ವಂದಿಸಿದರು 

 ನೂತನ ಸಮಿತಿ ರಚನೆ 

ಜಿಲ್ಲಾಧ್ಯಕ್ಷರಾಗಿ ಸೈಯದ್ ಅಫ್ರೀದ್ ಉಪಾಧ್ಯಕ್ಷಾರಾಗಿ ತಾಜುದ್ದೀನ್, ಫಾತಿಮಾ ಸೈಫಾ, ನೌಫಲ್ ಉಪ್ಪಿನಂಗಡಿ, ಶಿಹಾಬ್ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿಗಳಾಗಿ ಅಶ್ವರ್ ಮಹಮ್ಮದ್ ನಿಝಾಂ ಕಾರ್ಯದರ್ಶಿಗಳಾಗಿ ಹಾಶಿಂ ಮತ್ತು ಫಾತಿಮ ಬುಶ್ರಾ ಬೆಳ್ತಂಗಡಿ, ಸಕೀನಾ ಮುನವ್ವರ ಮತ್ತು ಅಬ್ದುಲ್ ಖಾದರ್ ಆಯ್ಕೆಯಾದರು.

ತಾಲೂಕು ಪದಾಧಿಕಾರಿಗಳಾಗಿ ವಿವರ

ಬಂಟ್ವಾಳ ಅಧ್ಯಕ್ಷ ಝಿಯಾನ್, ಕಾರ್ಯದರ್ಶಿಯಾಗಿ ಸಿನಾನ್ ಮತ್ತು ಉಪಧ್ಯಕ್ಷರಾಗಿ ನಜೀಬ್, ಪುತ್ತೂರು ಅಧ್ಯಕ್ಷರಾಗಿ ಸಾಬಿತ್, ಉಪಾಧ್ಯಕ್ಷರಾಗಿ ಇರ್ಶಾದ್ , ಮುಕ್ತಾರ್ ಕಾರ್ಯದರ್ಶಿಯಾಗಿ ಗರೀಬ್ ನವಾಝ್, ಸಂಘಟನಾ ಕಾರ್ಯದರ್ಶಿಯಾಗಿ ಆಸಿಫ್, ಬೆಳ್ತಂಗಡಿ ಅಧ್ಯಕ್ಷರಾಗಿ ಫಾಝಿಲ್, ಉಪಾ ಧ್ಯಕ್ಷರಾಗಿ ಮನ್ಸೂರ್, ಸಂಘಟನಾ ಕಾರ್ಯದರ್ಶಿಯಾಗಿ ಮಿಜಾಝ, ಮಂಗಳೂರು ತಾಲೂಕು ಅಧ್ಯಕ್ಷರಾಗಿ ಮುನೀರ್ ಉಪಧ್ಯಕ್ಷರಾಗಿ  ಶಫೀರ್  ಕಾರ್ಯ ದರ್ಶಿಯಾಗಿ ರಾಝಾ ಹಸನ್ ಹಾಗೂ ಶಫೀಕ್ ಕೋಡಿ ಸಂಘಟನಾ ಕಾರ್ಯದರ್ಶಿಯಾಗಿ ಬಾತಿಷ್ ಹಾಗೂ ಮುಸ್ತಫಾ ಮಂಗಳೂರು ನಗರಾಧ್ಯಕ್ಷರಾಗಿ ಹರ್ಷದ್ ರೊಜಾರಿಯೋ ಕಾಲೇಜು, ಉಪಾಧ್ಯಕ್ಷರಾಗಿ ಅಬ್ದುಲ್ ಬಾಸಿತ್ ಎ.ಜೆ ಕಾಲೇಜು, ಕಾರ್ಯದರ್ಶಿಯಾಗಿ ಆಕಿಫ್ ಅಲೋಶಿಯಸ್ ಕಾಲೇಜು  , ರಕೀಬ್ ತಲಪಾಡಿ ಅಮೃತ್ ಪಡೀಲ್ ಕಾಲೇಜು, ಸಂಘಟನಾ ಕಾರ್ಯದರ್ಶಿಯಾಗಿ ಹಫೀಝ್ ಬದ್ರಿಯಾ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News