ಬಾಲಕಿಯರಿಗೆ ಥಳಿಸಿ, ‘ವೇಶ್ಯೆಯರು’ ಎಂದ ಬಿಜೆಪಿ ಮಹಿಳಾ ಸೆಲ್‌ ನಾಯಕಿ: ಆರೋಪ

Update: 2018-09-08 15:53 GMT

ಹೊಸದಿಲ್ಲಿ, ಸೆ. 8: ನೋಯ್ಡಾದಲ್ಲಿ ಸರಕಾರೇತರ ಸಂಸ್ಥೆ ನಡೆಸುತ್ತಿರುವ ಆಶ್ರಯಧಾಮದಲ್ಲಿ ದುಬಾರಿ ವಾಚ್, ಸುಗಂಧ ದ್ರವ್ಯದ ಬಾಟಲಿಗಳು ಪತ್ತೆಯಾದ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಸೆಲ್‌ನ ಸದಸ್ಯೆ ಡಿಂಪಲ್ ಆನಂದ್ ಇಲ್ಲಿನ ಬಾಲಕಿಯರಿಗೆ ಥಳಿಸಿ, ಮತ್ತೆ ಮತ್ತೆ ಅವರನ್ನು ವೇಶ್ಯೆಯರು ಎಂದು ಹೇಳಿರುವುದು, ಅಲ್ಲಿದ್ದ ಬಾಲಕಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ನಂತರ ಉತ್ತರಪ್ರದೇಶದ ಮಹಿಳಾ ಆಯೋಗ ತನಿಖೆ ಆರಂಭಿಸಿದೆ.

 ಈ ಬಗ್ಗೆ ಸರಕಾರೇತರ ಸಂಸ್ಥೆ ಸಾಯಿ ಕೃಪಾ ಬಿಜೆಪಿ ಸದಸ್ಯೆ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದೆ ಹಾಗೂ ಈ ವಿಷಯವನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ತಂದಿದೆ. ಇತ್ತೀಚೆಗಿನ ಘಟನೆ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ನಮ್ಮ ಆಶ್ರಯ ಧಾಮವನ್ನು ಪರಿಶೀಲನೆ ನಡೆಸಲು ಬಯಸಿದರೆ ಉತ್ತಮ. ಆದರೆ, ರಾಜಕೀಯ ವ್ಯಕ್ತಿಗಳನ್ನು ಆಶ್ರಯ ಧಾಮದ ಒಳಗಡೆ ಯಾಕೆ ಆಹ್ವಾನಿಸಬೇಕು ಹಾಗೂ ಅನಗತ್ಯ ಗೊಂದಲ ಯಾಕೆ ಸೃಷ್ಟಿಸಬೇಕು ? ಆಶ್ರಯ ಧಾಮಕ್ಕೆ ಅಚ್ಚರಿಯ ಭೇಟಿ ನೀಡಿದ್ದ ಮಹಿಳಾ ಆಯೋಗದೊಂದಿಗೆ ಮಹಿಳಾ ಪೊಲೀಸರು ಇರಲಿಲ್ಲ. ನಮ್ಮದು ಬಾಲಕಿಯರ ಆಶ್ರಯ ಧಾಮ ಎಂದು ಸರಕಾರೇತರ ಸಂಸ್ಥೆ ಹಾಗೂ ನೋಯ್ಡೆ ಸೆಕ್ಟರ್ 12ರಲ್ಲಿರುವ ಆಶ್ರಯ ಧಾಮದ ಸ್ಥಾಪಕಿ ಅಂಜನಾ ರಾಜಗೋಪಾಲ್ ಹೇಳಿದ್ದಾರೆ.

 ‘‘ನಾವು ಎನ್‌ಜಿಒಗಳು. ಸುಗಂಧ ದ್ರವ್ಯಗಳ ಬಾಟಲಿ, ವಾಚ್‌ಗಳನ್ನು ದೇಣಿಗೆ ಎಂದು ಹೇಳುತ್ತಿರುವ ಬಗ್ಗೆ ನಾವು ತಂಡಕ್ಕೆ ಅಗತ್ಯವಿರುವ ವಿವರಣೆಗಳನ್ನು ನೀಡಿದ್ದೇವೆ’’ ಎಂದು ರಾಜ್‌ಗೋಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News