ಸೆ.10ರಂದು ಪ್ರತಿಭಟನೆಗೆ ಎಡಪಕ್ಷಗಳ ಕರೆ

Update: 2018-09-08 14:35 GMT

ಉಡುಪಿ, ಸೆ.8: ಬಿಜೆಪಿ ಸರಕಾರದ ನೀತಿಗಳಿಂದಾಗಿ ಪೆಟ್ರೋಲಿಯಂ ಉತ್ಪನ್ನ ಮತ್ತು ಇತರೆ ವಸ್ತುಗಳ ಬೆಲೆ ಏರಿಕೆ, ರಫೆಲ್ ವಿಮಾನ ಖರೀದಿ ಹಗರಣ, ಉದ್ಯೋಗ ಸೃಷ್ಟಿಸಲು ವಿಫಲ, ಕೋಮುವಾದಿ-ಸರ್ವಾಧಿಕಾರಿ ಧೋರಣೆಗಳ ಮುಂದುವರಿಕೆ ಸೇರಿದಂತೆ ವಿವಿಧ ಜನವಿರೋಧಿ ನೀತಿಗಳ ವಿರುದ್ಧ ದೇಶದಾದ್ಯಂತ ಹರತಾಳ, ಪ್ರತಿಭಟನೆ ನಡೆಸಲು 5 ಎಡ ಪಕ್ಷಗಳು ಕರೆ ನೀಡಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರಗಳಲ್ಲಿ ಪ್ರತಿಭಟನೆ ನಡೆಸಲು ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ನಿರ್ಧರಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹಿಂದೆಂದೂ ಕಾಣದಷ್ಟು ಏರಿಕೆ ಯಾಗಿದೆ. ಇದರಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿರುವುದಲ್ಲದೆ ಹಣದುಬ್ಬರ ಉಂಟಾಗಿದೆ. ರೂಪಾಯಿ ಮೌಲ್ಯ ಕುಸಿತಗೊಂಡಿರುವುದರಿಂದ ದೇಶದ ಆರ್ಥಿಕತೆ ಕುಸಿದಂತಾಗಿದೆ. ರಫೇಲ್ ವಿಮಾನ ಖರೀದಿ ಹಗರಣದಿಂದ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟವಾದುದು ಮಾತ್ರವಲ್ಲದೆ ಬೆಂಗಳೂರಿನ ಸಾರ್ವಜನಿಕ ಉದ್ದಿಮೆಯಾದ ಎಚ್‌ಎಎಲ್‌ಗೆ ಸಿಗಬೇಕಾಗಿದ್ದ ವಿಮಾನ ತಯಾರಿಕೆಯ ಅವಕಾಶ ಕೈತಪ್ಪಿಹೋಗಿದೆ. ಇದರಿಂದ ಉದ್ಯೋಗ ನಷ್ಟವಾಗಿದೆ. ಈ ಹಗರಣವು ಬೋಫೋರ್ಸ್ ಹಗರಣಕ್ಕಿಂತ ಹಲವು ಪಟ್ಟು ದೊಡ್ಡದು ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹಿಂದೆಂದೂ ಕಾಣದಷ್ಟು ಏರಿಕೆ ಯಾಗಿದೆ. ಇದರಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿರುವುದಲ್ಲದೆ ಹಣದುಬ್ಬರ ಉಂಟಾಗಿದೆ. ರೂಪಾಯಿ ಮೌಲ್ಯ ಕುಸಿತಗೊಂಡಿರುವುದರಿಂದ ದೇಶದ ಆರ್ಥಿಕತೆ ಕುಸಿದಂತಾಗಿದೆ. ರಫೇಲ್ ವಿಮಾನ ಖರೀದಿ ಹಗರಣದಿಂದ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟವಾದುದು ಮಾತ್ರವಲ್ಲದೆ ಬೆಂಗಳೂರಿನ ಸಾರ್ವಜನಿಕ ಉದ್ದಿಮೆಯಾದ ಎಚ್‌ಎಎಲ್‌ಗೆ ಸಿಗಬೇಕಾಗಿದ್ದ ವಿಮಾನ ತಯಾರಿಕೆಯ ಅವಕಾಶ ಕೈತಪ್ಪಿಹೋಗಿದೆ. ಇದರಿಂದ ಉದ್ಯೋಗ ನಷ್ಟವಾಗಿದೆ. ಈ ಹಗರಣವು ಬೋಫೋರ್ಸ್ ಹಗರಣಕ್ಕಿಂತ ಹಲವು ಪಟ್ಟು ದೊಡ್ಡದು ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಬೆಳೆ ನಾಶ, ಉತ್ಪಾದನೆಗೆ ತಕ್ಕ ಬೆಲೆ ಇಲ್ಲದೆ, ಸಾಲತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ತಯಾರಿಲ್ಲ. ಆದರೆ ದೇಶದ ದೊಡ್ಡ ಉದ್ದಿಮೆದಾರರು ಮಾಡಿದ ಸುಮಾರು ರೂ. 4 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲವನ್ನು ಕೇಂದ್ರ ಸರಕಾರ ಈಗಾಗಲೇ ಮನ್ನಾ ಮಾಡಿದೆ. ತಮ್ಮ ತಪ್ಪುಗಳನ್ನು ಮರೆಮಾಚಲು, ಜನರ ಹೋರಾಟದ ಹಾದಿಯನ್ನು ತಪ್ಪಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಹತ್ಯೆ ಮಾಡಲಾಗುತ್ತಿದೆ. ಪ್ರತಿಭಟನೆ ನಡೆಸುವ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ.

ಈ ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯಲು ಸೆ.10ರಂದು ದೇಶದಾದ್ಯಂತ ಹರತಾಳ, ಪ್ರತಿಭಟನೆ ನಡೆಸಲು ಎಡಪಕ್ಷಗಳು ಕರೆ ನೀಡಿವೆ. ಜಿಲ್ಲೆಯ ನಾಗರಿಕರು, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಹರತಾಳ ನಡೆಸಿ ಬೆಂಬಲ ನೀಡುವಂತೆ ಅವರು ಮನವಿ ಮಾಡಿದೆ.

ಪಕ್ಷದ ವತಿಯಿಂದ ಉಡುಪಿಯಲ್ಲಿ ಸಂಜೆ 5:30ಕ್ಕೆ ಅಜ್ಜರಕಾಡಿನಲ್ಲಿ ಮತ್ತು ಕುಂದಾಪುರದಲ್ಲಿ ಸಂಜೆ 4 ಗಂಟೆಗೆ ಶಾಸ್ತ್ರಿ ಸರ್ಕಲ್‌ನಲ್ಲಿ ಸೆ.10ರಂದು ಪ್ರತಿಭಟನೆ ನಡೆಯಲಿದೆ. ಸಾರ್ವಜನಿಕರು ಇದರಲ್ಲಿ ಭಾಗವಹಿಸುವಂತೆ ಸಿಪಿಎಂ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News