ದ.ಕ. ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಯೋಗಾಸನ ಸ್ಪರ್ಧೆ: ಆಳ್ವಾಸ್ ಕಾಲೇಜಿಗೆ ಪ್ರಶಸ್ತಿ

Update: 2018-09-08 14:50 GMT

ಮೂಡುಬಿದಿರೆ, ಸೆ. 8: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ತಾಲೂಕು ಹಾಗೂ ದ.ಕ.ಜಿ.ಪಂ.ಸ.ಪ.ಪೂ ಕಾಲೇಜು, ಕಲ್ಲಡ್ಕ ಶ್ರೀರಾಮ ಕಾಲೇಜು ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು 19  ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು  ತಮ್ಮದಾಗಿಸಿಕೊಂಡಿದ್ದಾರೆ.

19 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಂಕ್ರಪ್ಪ (ಪ್ರಥಮ ಸ್ಥಾನ), ರುದ್ರಮನಿ (ತೃತೀಯ ಸ್ಥಾನ), ರಿದಮಿಕ್‍ನಲ್ಲಿ ಮಹೇಶ್ (ಪ್ರಥಮ ಸ್ಥಾನ), ಆರ್ಟಿಸ್ಟಿಕ್‍ನಲ್ಲಿ ಗಣೇಶ (ಪ್ರಥಮ ಸ್ಥಾನ), ರಿದಮಿಕ್‍ನಲ್ಲಿ ಪೂಜಾ ವಿ ಎಸ್ (ಪ್ರಥಮ ಸ್ಥಾನ) ಪಡೆದಿದ್ದಾರೆ.

ಮುಂದಿನ ತಿಂಗಳಿನಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಳ್ವಾಸ್ ಕಾಲೇಜಿನಿಂದ 6 ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News