ಟ್ರಂಪ್ ವಿಭಜನೆಯ ಲಕ್ಷಣ ಮಾತ್ರ, ಕಾರಣವಲ್ಲ: ಒಬಾಮ

Update: 2018-09-08 15:13 GMT

ವಾಶಿಂಗ್ಟನ್, ಸೆ. 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ವಿಭಜನೆ ಮತ್ತು ಧ್ರುವೀಕರಣದ ‘ಕಾರಣಕರ್ತರಲ್ಲ, ಲಕ್ಷಣ ಮಾತ್ರ’ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಶುಕ್ರವಾರ ಹೇಳಿದ್ದಾರೆ.

ಟ್ರಂಪ್ ಹಲವು ವರ್ಷಗಳಿಂದ ರಾಜಕಾರಣಿಗಳು ಕದಡಿರುವ ಅತೃಪ್ತಿಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಅಷ್ಟೆ ಎಂದರು.

ಅರ್ಬಾನ ಶಾಂಪೇನ್‌ನಲ್ಲಿರುವ ಇಲಿನಾಯಿಸ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣದ ವೇಳೆ ಅವರು ಈ ಮಾತುಗಳನ್ನು ಹೇಳಿದರು.

ಅಲ್ಲಿ ಅವರಿಗೆ ‘ಸರಕಾರದಲ್ಲಿ ನೈತಿಕತೆ’ಗಾಗಿನ ಪ್ರಶಸ್ತಿಯೊಂದನ್ನು ನೀಡಲಾಯಿತು.

ಇದರೊಂದಿಗೆ ಅವರು ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಶೀಘ್ರದಲ್ಲೇ ಆರಂಭಗೊಳ್ಳಲಿರುವ ಪ್ರಚಾರಕ್ಕೆ ಮುಹೂರ್ತವಿಟ್ಟಿದ್ದಾರೆ ಎಂದು ಭಾವಿಸಲಾಗಿದೆ.

ಅವರು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರಾದರೂ, ನಿಧಿ ಸಂಗ್ರಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರಾದರೂ, ತನ್ನ ಅಧ್ಯಕ್ಷೀಯ ಅವಧಿಯ ಬಳಿಕದ ಹೆಚ್ಚಿನ ಸಮಯವನ್ನು ನೇಪಥ್ಯದಲ್ಲೇ ಕಳೆದಿದ್ದಾರೆ.

ಟ್ರಂಪ್ ಅವಧಿಯ ರಾಜಕೀಯದ ಬಗ್ಗೆ ಅವರು ನೇರ ಮಾತುಗಳಲ್ಲಿ ತನ್ನ ಅಭಿಪ್ರಾಯ ಹೇಳಿರುವುದು ಅಸಹಜವಾಗಿದೆ. ಅದೂ ಅಲ್ಲದೆ, ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಮತಗಳನ್ನು ಚಲಾಯಿಸುವಂತೆ ಅವರು ಮತದಾರರನ್ನು, ಅದರಲ್ಲೂ ಮುಖ್ಯವಾಗಿ ಯುವ ಮತದಾರರನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News