ಎಲ್ಟಿಟಿಇಗೆ ಮರುಜೀವ: ಮಾಜಿ ತಮಿಳು ಸಚಿವೆ ವಿರುದ್ಧ ಮೊಕದ್ದಮೆ

Update: 2018-09-08 15:17 GMT

ಕೊಲಂಬೊ, ಸೆ. 8: ಉತ್ತರ ತಮಿಳು ವಲಯದ ಮಕ್ಕಳ ವ್ಯವಹಾರಗಳ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯಕಲಾ ಮಹೇಶ್ವರನ್‌ರನ್ನು, ಪ್ರತ್ಯೇಕತಾವಾದಿ ಸಂಘಟನೆ ಎಲ್ಟಿಟಿಇಗೆ ಮರುಜೀವ ನೀಡುವುದಕ್ಕೆ ಸಂಬಂಧಿಸಿ ನೀಡಿರುವ ಹೇಳಿಕೆಗಾಗಿ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸರಕಾರದ ವಿರುದ್ಧ ಜನರನ್ನು ಪ್ರಚೋದಿಸಿದ ಕಾಯ್ದೆಯಡಿ ಅವರ ವಿಚಾರಣೆ ನಡೆಸಲಾಗುವುದು.

ಅಟಾರ್ನಿ ಜನರಲ್ ಶುಕ್ರವಾರ ಸಲ್ಲಿಸಿರುವ ಶಿಫಾರಸಿನ ಆಧಾರದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕುಸಿಯುತ್ತಿರುವ ಕಾನೂನು ಮತ್ತು ವ್ಯವಸ್ಥೆ ಹಾಗೂ ಏರುತ್ತಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ, ಎಲ್ಟಿಟಿಇಗೆ ಮರುಜನ್ಮ ನೀಡುವುದನ್ನು ಉತ್ತರದ ರಾಜ್ಯದ ಜನರು ಬಯಸುತ್ತಿದ್ದಾರೆ ಎಂದು ಜಾಫ್ನಾದಲ್ಲಿ ಜುಲೈಯಲ್ಲಿ ಮಾಡಿದ ಸಾರ್ವಜನಿಕ ಭಾಷಣವೊಂದರಲ್ಲಿ ಅವರು ಹೇಳಿದ್ದರು.

 ಅವರ ಈ ಮಾತುಗಳು ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಬಳಿಕ ಪ್ರಧಾನಿ ರನಿಲ್ ವಿಕ್ರಮಸಿಂೆ ಜೊತೆ ಮಾತನಾಡಿದ ಬಳಿಕ ಅವರು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News