ಪಾಕ್: ಆರ್ಥಿಕ ಸಲಹಾ ಮಂಡಳಿಗೆ ಇನ್ನೋರ್ವ ರಾಜೀನಾಮೆ

Update: 2018-09-08 15:22 GMT

ಇಸ್ಲಾಮಾಬಾದ್, ಸೆ. 8: ಪಾಕಿಸ್ತಾನದ ನೂತನ ಸರಕಾರದ ಆರ್ಥಿಕ ಸಲಹಾ ಮಂಡಳಿಯಿಂದ ಅರ್ಥಶಾಸ್ತ್ರಜ್ಞ ಆತಿಫ್ ಆರ್. ಮಿಯಾನ್‌ರನ್ನು ಕೈಬಿಟ್ಟ ಬೆನ್ನಿಗೇ, ಇನ್ನೋರ್ವ ಸದಸ್ಯ, ಲಂಡನ್‌ನಲ್ಲಿ ನೆಲೆಸಿರುವ ಇಮ್ರಾನ್ ರಸೂಲ್ ಹೊರಬಂದಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಆತಿಫ್ ಅಹ್ಮದಿ ಪಂಥದವರಾಗಿರುವ ಹಿನ್ನೆಲೆಯಲ್ಲಿ, ಅವರ ನೇಮಕಾತಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಒತ್ತಡಕ್ಕೆ ಬಾಗಿದ ಇಮ್ರಾನ್ ಖಾನ್ ಸರಕಾರ ಅವರನ್ನು ಮಂಡಳಿಯಿಂದ ಕೈಬಿಟ್ಟಿತ್ತು.

ಆತಿಫ್‌ರನ್ನು ಮಂಡಳಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ರಸೂಲ್ ಈ ಕ್ರಮ ತೆಗೆದುಕೊಂಡಿದ್ದಾರೆ.

‘‘ಭಾರವಾದ ಹೃದಯದೊಂದಿಗೆ ಮಂಡಳಿಗೆ ನಾನು ಇಂದು ಬೆಳಗ್ಗೆ ರಾಜೀನಾಮೆ ನೀಡಿದ್ದೇನೆ’’ ಎಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ರಸೂಲ್ ಶನಿವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News