ಚುನಾವಣೆಯಲ್ಲಿ ಅಕ್ರಮ ನಡೆದರೆ ದಿಗ್ಬಂಧನ: ಮಾಲ್ದೀವ್ಸ್‌ಗೆ ಅಮೆರಿಕ ಎಚ್ಚರಿಕೆ

Update: 2018-09-08 15:26 GMT

ವಾಶಿಂಗ್ಟನ್, ಸೆ. 8: ಸೆಪ್ಟಂಬರ್ 23ರಂದು ನಡೆಯಲು ನಿಗದಿಯಾಗಿರುವ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸದಿದ್ದರೆ ಮಾಲ್ದೀವ್ಸ್‌ನ ಪ್ರಮುಖ ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲಾಗುವುದು ಎಂದು ಅಮೆರಿಕ ಎಚ್ಚರಿಸಿದೆ.

ಮಾಲ್ದೀವ್ಸ್‌ನಲ್ಲಿ ‘ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಹಿನ್ನಡೆ’ಯಿಂದ ತನಗೆ ಕಳವಳವಾಗಿದೆ ಎಂದು ಅಮೆರಿಕ ಹೇಳಿದೆ.

‘‘ಮಾಲ್ದೀವ್ಸ್ ಪ್ರಜಾಸತ್ತಾತ್ಮಕ ದಾರಿಗೆ ಮರಳುತ್ತಿರುವಾಗ ಪ್ರಜಾಸತ್ತೆ, ಕಾನೂನಿನ ಆಡಳಿತ ಹಾಗೂ ಮುಕ್ತ ಮತ್ತು ನ್ಯಾಯೋಚಿತ ಚುನಾವಣಾ ಪ್ರಕ್ರಿಯೆಗೆ ತಡೆಯೊಡ್ಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೋವರ್ಟ್ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News