ಉಡುಪಿ: ನಡುರಸ್ತೆಯಲ್ಲೆ ಹೊತ್ತಿ ಉರಿದ ಕಾರು

Update: 2018-09-08 16:01 GMT

ಉಡುಪಿ, ಸೆ.8: ಕಾರೊಂದು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ ಘಟನೆ ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ನಗರದ ಜೋಡುಕಟ್ಟೆ ಸಮೀಪ ನಡೆದಿದೆ.

ಕೆಎ 16 ಡಿ 8118 ನಂಬರಿ ಕಾರು ಇದಾಗಿದ್ದು, ಇದರ ಮಾಲಕರು ಯಾರು ಎಂಬುದು ತಿಳಿದು ಬಂದಿಲ್ಲ.

ಚಲಿಸುತ್ತಿದ್ದ ಕಾರಿನಲ್ಲಿ ಒಮ್ಮೇಲೆ ಹೊಗೆ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಕಾರಿನಿಂದ ಇಳಿದು ಕೂಡಲೇ ಹೊರಗೆ ಓಡಿ ಹೋದರು. ತಕ್ಷಣವೇ ಕಾರು ಧಗಧಗೆ ಉರಿಯಿತ್ತೆನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News