ಯುವ ಸಮುದಾಯ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕು: ಸಯೋಮು ಇಕನೊಯಿ

Update: 2018-09-08 16:58 GMT

ಕೊಣಾಜೆ, ಸೆ. 8: ಯುವ ವಿದ್ಯಾರ್ಥಿಗಳು ಇತರರಿಗೆ ಪ್ರೇರೇಪಿಸುವಂತವರಾಗುವ ಜೊತೆಗೆ ಹೆತ್ತವರಿಗೆ, ಸಮಾಜಕ್ಕೆ, ಪರಿಸರ ಪೂರಕವಾಗಿ ವೃತ್ತಿಯನ್ನು  ಪೂರೈಸುವ ಪ್ರತಿಜ್ಞೆಯನ್ನು ತಮ್ಮೊಳಗೆ ಮಾಡಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಜಪಾನಿನ ಮಿಯಝಾಕಿ ವಿಶ್ವವಿದ್ಯಾನಿಲಯದ  ಅಧ್ಯಕ್ಷ ಸುಯೋಮು ಇಕನೊಯಿ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ  ಕ್ಷೇಮ ಕ್ಯಾಂಪಸ್ಸಿನ  ನಿಟ್ಟೆ ಗ್ರೌಂಡಿನಲ್ಲಿ  ಶನಿವಾರ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ  ಎಂಟನೆಯ ವಾರ್ಷಿಕ  ಘಟಿಕೋತ್ಸವ ದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ದ.ಕ.ಜಿಲ್ಲೆಯು ಶಿಕ್ಷಣದ ಕ್ರಾಂತಿ ಹಾಗೂ  ಪರಿಸರ ಕಾಳಜಿಯನ್ನು  ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಪ್ರಮುಖ ಸಂಸ್ಥೆಯಾಗಿರುವ ನಿಟ್ಟೆ ವಿಶ್ವವಿದ್ಯಾನಿಲಯ ಕಾರ್ಯಾಚರಿಸುತ್ತಾ ವಿದ್ಯಾರ್ಥಿಗಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಮಗ್ರವಾಗಿ ತೊಡಗಿಸಿ ಯಶಸ್ವಿ ಜೀವನ ರೂಪಿಸುವುದರೊಂದಿಗೆ  ವೃತ್ತಿ ಯಲ್ಲಿ ನಾಯಕತ್ವದ ಗುಣವನ್ನು ಬೆಳೆಸುತ್ತಾ ಬರುತ್ತಿದೆ ಎಂದರು.

ಜ್ಞಾನ ವಿನಿಮಯದ ಜೊತೆಗೆ ಅನುಭವ ಹೊಂದಲು ನಿಟ್ಟೆ ವಿ.ವಿ ಮತ್ತು ಜಪಾನಿನ ಮಿಯಾಝಕಿ ವಿಶ್ವವಿದ್ಯಾನಿಲಯ ವಿನಿಮಯ ಮಾಡಿಕೊಂಡಿದೆ. ಈ ಮೂಲಕ ಕ್ಷಯರೋಗ ಮತ್ತು ಕುಷ್ಠರೋಗದ ಪರಿಶೀಲನೆಯ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜಪಾನಿನಲ್ಲಿ ನಡೆದ ಸಮ್ಮೇಳನದಲ್ಲಿಯೂ ನಿಟ್ಟೆ ವಿಶ್ವವಿದ್ಯಾಲಯದ  ವಿದ್ಯಾರ್ಥಿಗಳು ಭಾಗವಹಿಸಿರುವುದು ಶ್ಲಾಘನೀಯ ಎಂದರು.

ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಗಳ ಸಚಿವ ಸುರೇಶ್ ಪ್ರಭು ಮಾತನಾಡಿ  ಸಾಮಾಜಿಕ ಬದಲಾವಣೆ ತರುವಂತಹ ಶಿಕ್ಷಣ ವ್ಯವಸ್ಥೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯ ನಡೆಸುತ್ತಿದೆ. ಶ್ರೇಷ್ಟ ಸಂಸ್ಕಾರದ ಶಿಕ್ಷಣದ ಜೊತೆಗೆ  ಜೀವನದ ಮಾರ್ಗಗಳ ದಾರಿಯನ್ನು ಸಂಸ್ಥೆ ತೋರಿಸುತ್ತಿದೆ.  ಡಿಗ್ರಿ ಪಡೆಯಲು ಮಾತ್ರ ಶಿಕ್ಷಣವಲ್ಲ, ಸಾಮಾಜಿಕ ಸೇವೆಯ ಒಂದು ಭಾಗ ಅನ್ನುವುದನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡಿಕೊಡುತ್ತಿರುವ ಮೂಲಕ ಪ್ರಧಾನಿಯವರ ಆಶಯವನ್ನು ಸಂಸ್ಥೆ ಪೂರೈಸುತ್ತಾ ಬಂದಿದೆ ಎಂದರು.

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ  ಅಧ್ಯಕ್ಷತೆ ವಹಿಸಿದ್ದರು.

ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾತಾಮ ಶೆಟ್ಟಿ,  ಆಡಳಿತ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ , ಸಹ ಕುಲಪತಿ ಪ್ರೊ. ಎಂಎಂ.ಎಸ್. ಮೂಡಿತ್ತಾಯ, ಕುಲಸಚಿವೆ ಪ್ರೊ. ಅಲ್ಕಾ ಕುಲಕರ್ಣಿ, ಪರೀಕ್ಷಾಂಗ ಕುಲಸಚಿವ ಡಾ. ಪ್ರಸಾದ್ ಬಿ.ಶೆಟ್ಟಿ, ಡೀನ್ ಡಾ. ಪ್ರಕಾಶ್ , ವೈಸ್ ಡೀನ್ ಹಾಗೂ ಎಲ್ಲಾ ವಿಭಾಗದ  ಕಾಲೇಜಿನ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.

ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್  ಭಂಡಾರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿಸಲಾಗಿರುವ ವಿವಿ ಈ ಬಾರಿ ಗೌರವಯುತವಾದ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಅಮೆರಿಕಾದ ಪೆನ್ಸಿಲ್ವೇನಿಯಾದ ಹೃದ್ರೋಗ ತಜ್ಞ ಡಾ. ಕಂದಾವರ ನಾರಾಯಣ ಶೆಟ್ಟಿ ಹಾಗೂ ಅಶೋಕ್ ಲೈಲ್ಯಾಂಡ್ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿನೋದ್ ಕೆ. ದಾಸರಿ ಅವರಿಗೆ ಪ್ರಧಾನ  ಮಾಡಲಾಯಿತು.

ಡಾಕ್ಟರ್ ಆಫ್ ಫಿಲಾಸಫಿ -20,  ವೈದ್ಯಕೀಯ  -196, ದಂತ ವೈದ್ಯಕೀಯ-138, ಫಾರ್ಮಸಿ-168, ನರ್ಸಿಂಗ್ -87, ಫಿಸಿಯೋಥೆರಪಿ-78, ಅಲೈಡ್ ಹೆಲ್ತ್ ಸೈನ್ಸ್ -73, ಪತ್ರಿಕೋದ್ಯಮ ವಿಭಾಗದ-30 ಹಾಗೂ ಬಯಲಾಜಿಕಲ್ ಸೈನ್ಸ್ ವಿಭಾಗದ 65  ಸೇರಿದಂತೆ ಒಟ್ಟು 855 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ನಡೆಯಿತು.

ನಿಟ್ಟೆ ಪರಿಗಣಿಸಲಾಗಿರುವ ವಿವಿ ಹಾಗೂ ದತ್ತಿನಿಧಿಯಿಂದ ಒಟ್ಟು 16 ಚಿನ್ನದ ಪದಕಗಳು,  ಸ್ನಾತಕ ಪೂರ್ವ ಹಾಗೂ ಸ್ನಾತಕೋತ್ತರ ಸೇರಿದಂತೆ 43 ಮೆರಿಟ್ ಸರ್ಟಿಫಿಕೇಟ್ ನೀಡಿ ಪುರಸ್ಕರಿಸಲಾಯಿತು.

ಚಿನ್ನದ ಪದಕ:  ಎಂಡಿಎಸ್ ನ ಡಾ. ಯೆರ್ರಾ ಅನುಷಾ, ಬಿಡಿಎಸ್ ನ ಡಾ. ದೀಪಿಕಾ ಜಯಕೃಷ್ಣ ನಾಯರ್, ರೇಡಿಯೋ ಡಯೋಗ್ನಾಸಿಸ್ ಸ್ನಾತಕೋತ್ತರ ವಿಭಾಗದ ಡಾ. ಧನಿ ರೆಡ್ಡಿ ಸಾಯಿ ಕೀರ್ತನಾ, ಜೆನರಲ್ ಮೆಡಿಸಿನ್ ಸ್ನಾತಕೋತ್ತರ ವಿಭಾಗದ ಡಾ. ನಂದಿತಾ ಸಿ.ಎನ್, ಎಂಬಿಬಿಎಸ್‍ನ  ಡಾ. ಹರ್ಷಿತಾ ಕೆ. ಪೂಂಜಾ, ಡಾ. ಚಿರಂಜೀವಿ ಎಸ್. ಗೌಡ, ಔಷಧೀಯ ಪ್ರಸವ ವಿಭಾಗದ ದೀಕ್ಷಾ ಎಸ್, ಫಾರ್ಮಸಿ ಸ್ನಾತಕೋತ್ತರ ವಿಭಾಗದ ಗಾಯತ್ರಿ ಬಾಬುರಾಜ್, ಫಿಸಿಯೋಥೆರಪಿ ಪದವಿ ವಿಭಾಗದ ಶಿಬಿನ್ ಬೋಬನ್ ಅಬ್ರಹಾಂ, ಬಿಎಸ್ ಸಿ ಬಯೋಮೆಡಿಕಲ್‍ನ ರಿಮ ಮೊಂಡಲ್, ಬಯೋಮೆಡಿಕಲ್ ಸ್ನಾತಕೋತ್ತರ ವಿಭಾಗದ ಜೋಯ್ ಲಿನ್ ಸಲ್ದಾನ್ಹ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಪದವಿ ವಿಭಾಗದ ವಿಜೇತ ಕೃಷ್ಣ, ಬಿಎಸ್‍ಸಿ ಮೆಡಿಕಲ್ ಇಮೇಜಿಂಗ್ ನ ನಫೀಸತ್ ಅಫೀಸಾ ಮೊನಾಕೊ, ಬಿಎಸ್‍ಸಿ ಅನಸ್ತೇಶಿಯಾ ಹಾಗೂ ಆಪರೇಶನ್ ಥಿಯೇಟರ್ ಟೆಕ್ನಾಲಜಿಯ ಅಪೂರ್ವ ಸದಾಕ್ಷರಿ ಕನವಿಮತ್ ಹಾಗೂ ಬಿಎಸ್ಸಿ ಮೆಡಿಕಲ್ ಲಾಬೋಟರಿ ಟೆಕ್ನಾಲಜಿಯ ಹವ್ವಾ ಮೆಹರಿನ್ ಚಿನ್ನದ ಪದಕ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News