ಮಂಗಳೂರು: ಎಸ್.ಕೆ.ಎಸ್.ಬಿ.ವಿ ರೇಂಜ್ ವತಿಯಿಂದ ಸಾರಥಿ ಸಂಗಮ, ಸ್ಪರ್ಧಾ ಕಾರ್ಯಕ್ರಮ

Update: 2018-09-08 17:14 GMT

ಮಂಗಳೂರು, ಸೆ. 8: ಎಸ್.ಕೆ.ಎಸ್.ಬಿ.ವಿ ರೇಂಜ್ ವತಿಯಿಂದ ಸಾರಥಿ ಸಂಗಮ ಮತ್ತು ಸ್ಪರ್ಧಾ ಕಾರ್ಯಕ್ರಮವು ಮುಹಿಯದ್ದೀನ್ ಮದರಸ ಪಕ್ಕಲಡ್ಕದಲ್ಲಿ ಜರುಗಿತು.

ಅಂದು ಬೆಳಗ್ಗೆ 11 ಗಂಟೆಗೆ ಭಾಷಣ ಮತ್ತು ಪೋಸ್ಟರ್ ಡಿಸೈನ್ ಸ್ಪರ್ಧೆಯೊಂದಿಗೆ ಪ್ರಾರಂಭಿಸಿತು. ಮಧ್ಯಾಹ್ನ ನಡೆಸಲಾದ ಮಜ್ಲಿಸುನ್ನೂರ್ ಕಾರ್ಯಕ್ರಮದ ನೇತೃತ್ವವನ್ನು ರೇಂಜ್ ಮುದರ್ರಿಬ್ ತ್ವಾಹ ವಾಫೀ ಹಾಗೂ ಸ್ಥಳೀಯ ಖತೀಬ್ ನಝೀರ್ ಅಝ್ಹರಿ ವಹಿಸಿದರು. ನಂತರ ನಡೆದ ಎಸ್.ಬಿ.ವಿ ನೂತನ ಸಮಿತಿ ರಚನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನ ರೇಂಜ್ ಉಪಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ವಹಿಸಿದರು.

ಎಸ್.ಬಿ.ವಿ ಕನ್ವೀನರ್ ಅಬ್ದುಸ್ಸಮದ್ ಅನ್ಸಾರೀ ಸ್ವಾಗತಿಸಿದರು. ಬಿತ್ತುಪಾದೆ ಖತೀಬ್ ಇಸ್ಮಾಈಲ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ಕೆ ಎಸ್.ಬಿ.ವಿ ಸಿಲ್ವರ್ ಜುಬಿಲಿ ಪೋಸ್ಟರ್ ಬಿಡುಗಡೆ ಮಾಡಿ ಮುಖ್ಯ ಪ್ರಭಾಷಣ ನಡೆಸಿದ ರೇಂಜ್ ಮುದರ್ರಿಬ್ ತ್ವಾಹ ವಾಫೀ ಎಸ್.ಬಿ.ವಿಯ ಪ್ರಾಧಾನ್ಯತೆ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಪ್ರಧಾನ ಭಾಗವಾದ ಎಸ್ ಕೆ ಎಸ್.ಬಿ.ವಿ ನೂತನ ಸಮಿತಿ ರಚನೆ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲೇ ನಡೆಯಿತು. ಎಸ್ ಕೆ ಎಸ್.ಬಿ.ವಿ ನೂತನ ಅಧ್ಯಕ್ಷರಾಗಿ ಅಲ್ಮಾಝ್ ಬೆಂಗರೆ ಮದ್ರಸ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ಫಾಕ್ ಜೋಕಟ್ಟೆ ಮದ್ರಸ, ಖಜಾಂಜಿಯಾಗಿ ಜಲಾಲ್ ಅಝ್ಹರಿಯಾ ಮದ್ರಸ, ಉಪಾಧ್ಯಕ್ಷರಾಗಿ ಮುಹಮ್ಮದ್ ರಾಝಿ ಬೋಳಾರ ಮದ್ರಸ, ಸುಹೈಲ್ ಬೆಂಗರೆ ಬ್ರಾಂಚ್ ಮದ್ರಸ ಹಾಗೂ ಜೊತೆ ಕಾರ್ಯದರ್ಶಿಯಾಗಿ ಸೈಫುದ್ದೀನ್ ನಡುಪಳ್ಳಿ ಮದ್ರಸ, ಝಾಹಿದ್ ಪಕ್ಕಲಡ್ಕ ಮದ್ರಸ ಆಯ್ಕೆಗೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೇಂಜ್ ಪ್ರಧಾನ ಕಾರ್ಯದರ್ಶಿ ಅಲೀ ಫೈಝಿ ಪರಪ್ಪು ಪ್ರಾಸ್ತಾವಿಕ ಭಾಷಣ ಮಾಡಿದರು. ರೇಂಜ್ ಎಸ್.ಬಿ.ವಿ ಚೆಯರ್ಮಾನ್ ಎ.ಕೆ ಮುಹಮ್ಮದ್ ಮುಸ್ಲಿಯಾರ್, ಪರೀಕ್ಷಾ ಮಂಡಳಿ ಚೆಯರ್ಮಾನ್ ನಾಸಿರ್ ಕೌಸರೀ, ಸ್ಪರ್ಧಾ ತೀರ್ಪುಗಾರರಾದ ಇರ್ಫಾನ್ ಮುಸ್ಲಿಯಾರ್, ರಝಾಕ್ ಮಿಸ್ಬಾಹಿ, ರೇಂಜ್ ಉಪಾಧ್ಯಕ್ಷರಾದ ಖಾಸಿಂ ಅರ್ಶದಿ,ಪಕ್ಕಲಡ್ಕ ಮದರಸ ಸಮೀತಿ ಸದಸ್ಯರಾದ ನಿಯಾಝ್, ಶಂಸುಲ್ ಉಲಮಾ ಯೂತ್ ವಿಂಗ್ ಪಕ್ಕಲಡ್ಕ ಇದರ ಕಾರ್ಯದರ್ಶಿ ರಿಯಾಝ್ ಹಾಗೂ ವಿವಿಧ ಮದ್ರಸಗಳ ಪ್ರಧಾನ ಅಧ್ಯಾಪಕರು, ಎಸ್ ಕೆ ಎಸ್ ಬಿ ವಿ ಪದಾಧಿಕಾರಿಗಳು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಹಲವಾರು ಮದ್ರಸಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕರಣೆಯನ್ನು ನೀಡಿದ ಪಕ್ಕಲಡ್ಕ ಜಮಾಅತ್ ಕಮಿಟಿ, ಎಸ್.ಬಿ.ವಿ ಪಕ್ಕಲಡ್ಕ ಶಾಖೆ, ಶಂಸುಲ್ ಉಲಮಾ ಯೂತ್ ವಿಂಗ್ ಮುಂತಾದವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ರೇಂಜ್ ವೈಸ್ ಕನ್ವೀನರ್ ಅನ್ವರ್ ಅಝ್ಹರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News