ಭಾರತದ ರೂಪಾಯಿ ಬಲಿಷ್ಠವಾಗಿದೆ, ಸಮಸ್ಯೆ ಸೃಷ್ಟಿಸುತ್ತಿರುವುದು ಡಾಲರ್: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Update: 2018-09-08 17:26 GMT

ಹೊಸದಿಲ್ಲಿ, ಸೆ.8: ತೈಲ ಬೆಲೆಯೇರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತಕ್ಕೆ ಸಂಬಂಧಿಸಿ ವಿಪಕ್ಷಗಳು ಮೋದಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ನಡುವೆಯೇ ಕೇಂದ್ರ ಪೆಟ್ರೋಲಿಯಂ ಸಚಿವ ದೇವೇಂದ್ರ ಪ್ರಧಾನ್, “ರೂಪಾಯಿ ಎಂದಿಗಿಂತಲೂ ಬಲಿಷ್ಠವಾಗಿದೆ. ಸಮಸ್ಯೆ ಸೃಷ್ಟಿಸುತ್ತಿರುವುದು ಡಾಲರ್” ಎಂದಿದ್ದಾರೆ ಎಂದು ವರದಿಯಾಗಿದೆ.

“ಬೇರೆಲ್ಲಾ ಕರೆನ್ಸಿಗಳಿಗೆ ಹೋಲಿಸಿದರೆ ಇಂದು ಭಾರತದ ಕರೆನ್ಸಿ ಸದೃಢವಾಗಿದೆ. ಆದರೆ ನಾವು ತೈಲವನ್ನು ಹೇಗೆ ಖರೀದಿಸುತ್ತೇವೆ?, ಡಾಲರ್ ಮೂಲಕ. ಇಂದು ಡಾಲರ್ ಜಗತ್ತಿನ ಅತೀ ದೊಡ್ಡ ಕರೆನ್ಸಿ. ಅದುವೇ ಸಮಸ್ಯೆ ಸೃಷ್ಟಿಸುತ್ತಿದೆ” ಎಂದು ಪ್ರಧಾನ್ ಹೇಳಿದರು.

“ಈ ಸಮಸ್ಯೆ ಬಗ್ಗೆ ಹಣಕಾಸು ಸಚಿವಾಲಯ ಈಗಾಗಲೇ ಸ್ಪಷ್ಟನೆ ನೀಡಿದೆ. ಅಮೆರಿಕದ ಡಾಲರ್ ವಿಲಕ್ಷಣ ಮತ್ತು ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಇದು ಜಾಗತಿಕ ಆರ್ಥಿಕತೆಗೂ ಒಳ್ಳೆಯದಲ್ಲ” ಎಂದವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News