ಅಮೆರಿಕದಲ್ಲಿ ಗಂಟೆಗೆ 220 ಕಿ.ಮಿ. ವೇಗದ ಚಂಡಮಾರುತ: 10 ಲಕ್ಷ ಜನರ ತೆರವಿಗೆ ಆದೇಶ

Update: 2018-09-11 16:59 GMT

ಚಾರ್ಲ್‌ಸ್ಟನ್ (ಅಮೆರಿಕ), ಸೆ. 11: ಗಂಟೆಗೆ 220 ಕಿ.ಮೀ. ವೇಗದ ಗಾಳಿಯನ್ನು ಹೊತ್ತ ಅತ್ಯಂತ ಪ್ರಬಲ ‘ಕೆಟಗರಿ 4’ರ ಚಂಡಮಾರುತ ‘ಫ್ಲಾರೆನ್ಸ್’ ಅಮೆರಿಕದ ಪೂರ್ವ ಕರಾವಳಿಯತ್ತ ಧಾವಿಸುತ್ತಿದ್ದು, ಚಂಡಮಾರುತದ ದಾರಿಯಲ್ಲಿ ಬರುವ 10 ಲಕ್ಷಕ್ಕೂ ಅಧಿಕ ಜನರ ತೆರವಿಗೆ ಸೋಮವಾರ ಆದೇಶ ನೀಡಲಾಗಿದೆ.

‘‘ಇಂಥ ಅತ್ಯಂತ ಪ್ರಬಲ ಚಂಡಮಾರುತವೊಂದು ಪೂರ್ವ ಕರಾವಳಿಗೆ ಅಪ್ಪಳಿಸುತ್ತಿರುವುದು ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ’’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್‌ನಲ್ಲಿ ಎಚ್ಚರಿಸಿದ್ದಾರೆ.

ದಕ್ಷಿಣ ಕ್ಯಾರಲೈನದ ಪೂರ್ವ ಕರಾವಳಿಯ 10 ಲಕ್ಷಕ್ಕೂ ಅಧಿಕ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯಬೇಕೆಂದು ರಾಜ್ಯದ ಗವರ್ನರ್ ಹೆನ್ರಿ ಮೆಕ್‌ಮಾಸ್ಟರ್ ಆದೇಶಿಸಿದ್ದಾರೆ.

ಚಂಡಮಾರುತವು ಗುರುವಾರ ಕರಾವಳಿಗೆ ಅಪ್ಪಳಿಸುವುದೆಂದು ನಿರೀಕ್ಷಿಸಲಾಗಿದೆ.

ರಾಜ್ಯದ 46 ಕೌಂಟಿಗಳ ಪೈಕಿ 26ರಲ್ಲಿನ ಶಾಲೆಗಳು ಮಂಗಳವಾರದಿಂದಲೇ ಮುಚ್ಚಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News