ಬಂಟ್ವಾಳ: ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

Update: 2018-09-12 14:44 GMT

ಬಂಟ್ವಾಳ, ಸೆ. 12: ಮಾನವ ಪರಿಸರ ಸ್ನೇಹಿಯಾದರೆ ಆರೋಗ್ಯ ಪೂರ್ಣ ಬದುಕು ನಮ್ಮದಾಗಬಹುದು. ಭೂಮಿ ತಾಯಿ ಮುನಿದರೆ ಸರ್ವನಾಶ. ನಮ್ಮ ಹಿರಿಯರು ಸಾವಯವ ಕೃಷಿ ಅವಲಂಬಿತಾಗಿ ಶತಾಯುಷಿಗಳಾಗಿದ್ದಾರೆ ಎಂದು ಸಾವಯವ ಕೃಷಿಕ ಐ. ಕುಶಾಲಪ್ಪ ಗೌಡ ಬೆಳ್ತಂಗಡಿ ಹೇಳಿದ್ದಾರೆ. 

ಅವರು ಇತ್ತೀಚೆಗೆ ಜೇಸೀಐ ಜೋಡುಮಾರ್ಗ ನೇತ್ರಾವತಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್, ವಿಜಯ ಬ್ಯಾಂಕ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ದೇವಂದಬೆಟ್ಟು ಶ್ರೀವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆದ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಾವಯವ ಕೃಷಿ ವಿಧಾನ, ಎರೆಹುಳು ಗೊಬ್ಬರ, ಬೀಜಗಳ ಆಯ್ಕೆ, ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾ ಗಾರ ವನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ವಿಜಯ ಬ್ಯಾಂಕ್ ತುಂಬೆ ಇದರ ವ್ಯವಸ್ಥಾಪಕ ವೈ. ಆರ್. ದಾಮ್ಲೆ , ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಆಚಾರ್, ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಬಿ ಶೆಟ್ಟಿ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ  ಉಮೇಶ್ ನಿರ್ಮಲ್, ಜೇಸೀಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷ ಸವಿತಾ ನಿರ್ಮಲ್, ಕಾರ್ಯದರ್ಶಿ ಹರ್ಷರಾಜ್ ಸಿ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯಕ್ರಮ ಸಂಯೋಜಕ ರವೀಂದ್ರ ಕುಕ್ಕಾಜೆ, ಉಪಸ್ತಿತರಿದ್ದರು.

ತೃಪ್ತಿ ರೈ ಪ್ರಾರ್ಥಿಸಿ, ಜೇಸಿ ಪೂರ್ವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News